ರಾಣೇಬೆನ್ನೂರು ನಗರ ದೇವತೆಯರ ಜಾತ್ರೆ : ಮೆರವಣಿಗೆಗೆ ನೂರು ಜನ ಮಾತ್ರ

ರಾಣೇಬೆನ್ನೂರು ನಗರ ದೇವತೆಯರ ಜಾತ್ರೆ : ಮೆರವಣಿಗೆಗೆ ನೂರು ಜನ ಮಾತ್ರ - Janathavaniರಾಣೇಬೆನ್ನೂರು, ಜ.12- ಇದೇ ದಿನಾಂಕ ದಿನಾಂಕ 25 ರಿಂದ 30ರವರೆಗೆ ನಡೆಯಲಿರುವ ನಗರ ದೇವತೆಯರಾದ ಗಂಗಾಜಲ ಹಾಗೂ ತುಂಗಾಜಲ ಶ್ರೀ ಚೌಡೇಶ್ವರಿ ದೇವಿಯರ ಜಾತ್ರೆಯ ಮೆರವಣಿಗೆಯಲ್ಲಿ  50 ರಿಂದ 100 ಭಕ್ತರು ಮಾತ್ರ ಭಾಗವಹಿಸಬೇಕು ಎಂದು ಇಂದು ನಡೆದ ಶಾಂತಿ ಸಭೆಯಲ್ಲಿ ಕಟ್ಟಪ್ಪಣೆಯ ತೀರ್ಮಾನ ಕೈಗೊಳ್ಳಲಾಯಿತು.

ಪ್ರತಿ ವರ್ಷದಂತೆ ಮರವಣಿಗೆ ಮಾಡಲು ಒಪ್ಪಿಗೆ ನೀಡಲಾಯಿತಾದರೂ ಡಿಜೆ ಧ್ವನಿವರ್ಧಕ, ವಿವಿಧ ವಾದ್ಯವೃಂದಗಳು, ಅದ್ಧೂರಿ ಆಡಂಬರಗಳಿಗೆ ಅವಕಾ ಶವಿಲ್ಲ. ಆದರೆ ಧಾರ್ಮಿಕ ವಿಧಿವಿಧಾನಗಳಿಗೆ ಯಾವುದೇ ತಡೆ ಇಲ್ಲ. ಜೊತೆಗೆ ಕೇಂದ್ರ ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಜಾತ್ರೆಯಲ್ಲಿ ಸಾಂಸ್ಕೃತಿಕ ಹಾಗೂ ಮನರಂಜನೆಯ ಯಾವ ಕಾರ್ಯಕ್ರಮಗಳಿಗೆ ಹಾಗೂ ಕಾಯಿ, ಕರ್ಪೂರ, ಬಳೆ, ಬೆಂಡು ಬತ್ತಾಸ ಮುಂತಾದ ಯಾವುದೇ ಅಂಗಡಿ ಗಳಿಗೆ ಪರವಾನಿಗೆ ಇಲ್ಲ. ಭಕ್ತರು ತಮ್ಮ ಎಂತಹದೇ ಧರ್ಮಾಧಾರಿತ ಹರಕೆಗಳನ್ನು ತೀರಿಸಲು ತಡೆ ಇಲ್ಲ. 

ನಗರಸಭೆಯಿಂದ ನಗರದಾದ್ಯಂತ ಸ್ವಚ್ಛತೆ ಹಾಗೂ ದಿನದ 24 ಗಂಟೆ ನೀರು ಸರಬರಾಜು, ಅಗ್ನಿಶಾಮಕ ದಳ, ಗೃಹರಕ್ಷಕ ದಳ ಹಾಗೂ ಪೊಲೀಸರ ಅವಶ್ಯಕ ಸೇವೆ ಲಭ್ಯವಾಗ ಲಿದೆ. ಒಟ್ಟಾರೆ ಸರಳ ರೀತಿ ಯಲ್ಲಿ ಜಾತ್ರೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ಬದ್ದತೆಯಾಯಿತು.

ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ನಗರಸಭೆ ಸದಸ್ಯರು, ಎರಡು ಜಾತ್ರಾ ಸಮಿತಿಯ ಪದಾಧಿಕಾರಿ ಗಳು, ತಹಶೀಲ್ದಾರ ಬಸನಗೌಡ ಕೋಟೂರ, ಪೌರಾಯುಕ್ತ ಡಾ. ಮಹಾಂತೇಶ್, ಪೊಲೀಸ್ ವೃತ್ತ ನಿರೀಕ್ಷಕ ವಿ.ಎಂ. ಗೌಡಪ್ಪಗೌಡ ಮತ್ತಿತರರಿದ್ದರು. ಶೇಖಪ್ಪ ಹೊಸಗೌಡ್ರ, ಶಶಿ ಬಸೇನಾಯಕ, ಪ್ರಕಾಶ ಪೂಜಾರ, ಜಯಶ್ರೀ ಪಿಸೆ, ಅನ್ನಪೂರ್ಣ ತಿಳವಳ್ಳಿ, ಮಲ್ಲಪ್ಪ ಅಂಗಡಿ, ಜಮ್ಮಣ್ಣಿ, ಮಣಿ ಪವಾರ್, ಮಲ್ಲಿಕಾರ್ಜುನ ಪೂಜಾರ್ ಮತ್ತಿತರರು ಮಾತನಾಡಿದರು.

error: Content is protected !!