ಜೋಳದ ರಾಶಿ ಗುಡ್ಡದ ಮೇಲೆ ಶ್ರೀ ಕೃಷ್ಣದೇವರಾಯನ ಪ್ರತಿಮೆ ಸೂಕ್ತ

‘ನಮ್ಮ ಕೆರೆ, ನಮ್ಮ ಹಕ್ಕು’ ಸಂಚಾಲಕ ಅಂಚೆ ಕೊಟ್ರೇಶ್‌

ಕೊಟ್ಟೂರು, ಜ.8- ಹೊಸಪೇಟೆಯ ಜೋಳದ ರಾಶಿ ಗುಡ್ಡದ ಮೇಲೆ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯನ ಪ್ರತಿಮೆ ಸ್ಥಾಪಿಸುವುದು ಸೂಕ್ತ ಎಂದು ಕೊಟ್ಟೂರಿನ ನಮ್ಮ ಕೆರೆ ನಮ್ಮ ಹಕ್ಕು ಸಂಚಾಲಕ ಅಂಚೆ ಕೊಟ್ರೇಶ್‌ ತಿಳಿಸಿದರು.

ಅವರು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಅರಣ್ಯ ಸಚಿವ ಆನಂದ್‌ಸಿಂಗ್‌ ಅವರಿಗೆ ಬರೆದಿರುವ ಪತ್ರವನ್ನು ಪ್ರಸ್ತಾಪಿಸಿ, ಮೂರ್ತಿ ಎಂದೊಡನೆ ಮೂಗು ಮುರಿಯುವ ಕಾಲ ಇದಾಗಿದೆ. ಭಗ್ನಗೊಳಿಸುವ ವಿಕೃತ ಮನಸ್ಸುಗಳು ಹುಟ್ಟಿಕೊಂಡು ಪ್ರತಿಮೆಯ ಮೇಲಿನ ಪ್ರೀತಿ ಕಡಿಮೆಯಾಗಿದೆ ಎಂದರು.

ಈ ದೃಷ್ಟಿಯಿಂದ ನೋಡಿದಲ್ಲಿ ಹೊಸಪೇಟೆಯ ಜೋಳದ ರಾಶಿ ಗುಡ್ಡದ ಮೇಲೆ ಯಾವ ಪ್ರತಿಮೆಗಳೂ ಬೇಡ ಎನ್ನುವವರಲ್ಲಿ ನಾನೂ ಒಬ್ಬ, ಆದರೆ ಸರ್ಕಾರ ಈಗಾಗಲೇ ಇದಕ್ಕೆ ಸಿದ್ಧವಾಗಿದ್ದರೆ ಅಲ್ಲಿ ತನ್ನ ನೆಲ, ಜಲ, ಸಾಹಿತ್ಯ, ಸಂಸ್ಕೃತಿ, ರಾಜ್ಯಾಡಳಿತದ ವೈಖರಿಯನ್ನು ವಿಶ್ವಾದ್ಯಂತ ಈಗಲೂ ನೆನಪಲ್ಲಿ ಇಡುವಂತೆ ಮಾಡಿದ ಚಕ್ರವರ್ತಿ ಶ್ರೀ ಕೃಷ್ಣದೇವರಾಯನ ಪುತ್ಥಳಿ ಸ್ಥಾಪಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.

error: Content is protected !!