ಬಸವ ಬಳಗ ಖಂಡನೆ
ದಾವಣಗೆರೆ, ಜ.6- ರಾಜ್ಯ ಸರ್ಕಾ ರವು ವಿವಿಧ ದಿನಪತ್ರಿಕೆಗಳ ಮುಖಪುಟ ದಲ್ಲಿ ಇಂದು ನೀಡಿರುವ ಜಾಹೀರಾತಿ ನಲ್ಲಿ ಕೆಲ ಅಂಶಗಳ ಕುರಿತಂತೆ ಪ್ರಕಟಿಸಿರುವುದನ್ನು ನಗರದ ಬಸವ ಬಳಗ ತೀವ್ರವಾಗಿ ಖಂಡಿಸಿದೆ.
`ಸನಾತನ, ಪ್ರಗತಿಪರ, ಚಿಂತನೆಯ, ಮರುಸೃಷ್ಠಿ’ ಏನಿದರ ಅರ್ಥ? ಎಂದು ಬಸವ ಬಳಗ ಪ್ರಶ್ನಿಸಿದೆ.
ಇಂದು ನಮಗೆ ಸನಾತನ ಅನುಭವ ಮಂಟಪದ ಅವಶ್ಯಕತೆ ಇಲ್ಲ. ನಮಗೆ ಇನ್ನೊಂದು ಸ್ಥಾವರದ ಅವಶ್ಯಕತೆಯೂ ಇಲ್ಲ. ನಮಗೆ ಬೇಕಿರುವುದು ಬಸವ ಚಿಂತನೆಗಳನ್ನು ಅಳವಡಿಸಲು, ಚರ್ಚಿಸಲು, ಬಸವಾದಿ ಶರಣರ, ಪ್ರಗತಿಪರರ ಚಿಂತನೆಗಳನ್ನು ಜೀವಂತವಾಗಿಡಲು ಅನುಭವ ಮಂಟಪ ಬೇಕಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸನಾತನ ಪ್ರಗತಿಪರ ಚಿಂತನೆಗಾಗಿ ಸ್ಥಳ ಬೇಕಿಲ್ಲ. ಇಂತಹ ಸನಾತನ ಚಿಂತನೆಯನ್ನು 850 ವರ್ಷಗಳ ಹಿಂದೆಯೇ ನಮ್ಮ ಶರಣರು ತಿರಸ್ಕರಿಸಿದ್ದಾರೆ. ನೀವು ಬಸವಣ್ಣನವರನ್ನು ಹಿಂದೂ ಧರ್ಮದ ಒಬ್ಬ ಪ್ರಗತಿಪರ ಚಿಂತಕ ಎಂದು ಬಿಂಬಿಸಲು ತಾವು ಮಾಡುತ್ತಿರುವ ಪ್ರಯತ್ನವನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.