ರೇಣುಕಾಚಾರ್ಯ ಜಮೀನಿಗೆ 3 ಸಾವಿರ ಟಿಪ್ಪರ್ ಲಾರಿ ಮಣ್ಣು

ಹೊನ್ನಾಳಿ, ಫೆ. 11 – ನೇರಲಗುಂಡಿ ಗ್ರಾಮದ ಕೆರೆ ಹೂಳೆತ್ತುವ  ಕಾಮಗಾರಿಯಲ್ಲಿ ಗುತ್ತಿಗೆದಾರರಿಂದ 3 ಸಾವಿರ ಟಿಪ್ಪರ್ ಲಾರಿಗಳಿಂದ ಶಾಸಕ ರೇಣುಕಾಚಾರ್ಯ ತಮ್ಮ ಜಮೀನಿಗೆ  ಮಣ್ಣು ಹಾಕಿಸಿಕೊಂಡಿರುವುದು ಚನ್ನಪ್ಪ ಸ್ವಾಮಿ ಆಣೆಗೂ ಸತ್ಯ ಎಂದು ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಆರೋಪಿಸಿದರು. ಗುರುವಾರ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರ ನೇರಲಗುಂಡಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಗೆ ಭೂಮಿ ಪೂಜೆ ಮಾಡುವ ಸಂದರ್ಭದಲ್ಲಿ ಶಾಸಕರು ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ.  ಕೆರೆ ಮಣ್ಣನ್ನು ತಮ್ಮ ಜಮೀನಿಗೆ ಹಾಕಿಸಿಕೊಂಡಿಲ್ಲ. ಮಾಜಿ ಶಾಸಕರು ಸುಳ್ಳು ಆರೋಪ ಮಾಡಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದ್ದರು.  ಇದಕ್ಕಾಗಿ ನಾನು ಈಗ ಉತ್ತರ ನೀಡುತ್ತಿದ್ದೇನೆ ಎಂದು ಶಾಂತನಗೌಡರು ಸ್ಪಷ್ಟಪಡಿಸಿದರು. 

ಉಪ ನೋಂದಣಾಧಿಕಾರಿಗಳ ಕಚೇರಿ, ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ತಕ್ಷಣ ಭ್ರಷ್ಟಾಚಾರ ನಿಲ್ಲದಿದ್ದರೆ ತಾಲ್ಲೂಕು ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಜಿ.ಪಂ ಮಾಜಿ ಅಧ್ಯಕ್ಷ ಆರ್.ನಾಗಪ್ಪ, ಯುವ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಪ್ರಶಾಂತ್ ಬಣ್ಣಜ್ಜಿ, ಎನ್‍ಎಸ್‍ಯುಐ ತಾಲ್ಲೂಕು ಅಧ್ಯಕ್ಷ ಮನು, ಕಾರ್ಯದರ್ಶಿ ಸುಜಯ್ ಇದ್ದರು

error: Content is protected !!