ಹರಿಹರ, ಜ.11- ನಗರದ ಪ್ರಸಿದ್ಧ ಐತಿಹಾಸಿಕ ಶ್ರೀ ಹರಿಹರೇಶ್ವರ ಮತ್ತು ಲಕ್ಷ್ಮೀ ದೇವಿಯ ಹುಂಡಿಯ ಹಣವನ್ನು ಇಂದು ಎಣಿಕೆಯನ್ನು ಗ್ರೇಡ್2 ತಹಶೀಲ್ದಾರ್ ಶಶಿಧರ್ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಮಾಡಲಾಗಿದ್ದು, ಶ್ರೀ ಹರಿಹರೇಶ್ವರ ದೇವಾಲಯದ ಹುಂಡಿಯಿಂದ 10, 58,377 ರೂಪಾಯಿ ಮತ್ತು ಶ್ರೀ ಲಕ್ಷ್ಮೀ ದೇವಾಲಯದಿಂದ 145,018 ರೂಪಾಯಿ ಸೇರಿದಂತೆ ಒಟ್ಟು12,03405 ಸಂಗ್ರಹವಾಗಿದೆ.
ಈ ಸಂದರ್ಭದಲ್ಲಿ ತಾಲ್ಲೂಕು ಆಡಳಿತದ ಸಿಬ್ಬಂದಿಗಳಾದ ಸಂಗೀತ ಜೋಷಿ, ನರಸಮ್ಮ, ಉಮೇಶ್, ಬೇಬಿ, ಇತರರು ಹಾಜರಿದ್ದರು.