ದಾವಣಗೆರೆ, ಮೇ 5- ಕರ್ನಾಟಕ ಬಂಜಾರ ರಕ್ಷಣಾ ವೇದಿಕೆಯಿಂದ ಪ್ರಧಾನ ಕಾರ್ಯದರ್ಶಿ ಎನ್. ಅರುಣ್, ಕಾರ್ಯಾಧ್ಯಕ್ಷ ಬಸವರಾಜ ನಾಯ್ಕ ಹಾಗೂ ರಾಜ್ಯ ಸಾಂಸ್ಕೃತಿಕ ಕಾರ್ಯದರ್ಶಿ ಎನ್. ಪುನೀತ್ ಕುಮಾರ್ ಅವರನ್ನು ಉಚ್ಛಾಟನೆ ಮಾಡಿರುವುದಾಗಿ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಡಿ. ನಾಯ್ಕ ತಿಳಿಸಿದ್ದಾರೆ.
ಸಂಘಟನೆಯ ಚಟುವಟಿಕೆಗಳ ಲೆಕ್ಕ ಕೊಡದ ಹಾಗೂ ಸಂಘಟನೆಗಾಗಿ ಕೆಲಸ ಮಾಡದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ಮೂವರೂ ದಾವಣಗೆರೆ ಜಿಲ್ಲೆಯವರು ಎಂದವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಸಂಘಟನೆಯ ಪಿ. ಲಚ್ಚೂ ನಾಯ್ಕ, ರೇವಣ್ಣ ನಾಯ್ಕ ಹಾಗೂ ಲೋಹಿತ್ ನಾಯ್ಕ ಉಪಸ್ಥಿತರಿದ್ದರು.