ದಾವಣಗೆರೆ, ಡಿ. 25- ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊಂದಾಣೆಕೆ ರಾಜಕಾರಣ ಮಾಡಿದ್ದಾರೆ ಎನ್ನುವುದು ಸತ್ಯ. ಇದಲಿಂದಲೇ ಬಿಜೆಪಿ ಲೋಕಸಭಾ ಕ್ಷೇತ್ರ ಕಳೆದುಕೊಳ್ಳಬೇಕಾಯಿತು ಎಂದು ಬಿಜೆಪಿ ಶಾಸಕ ಬಿ.ಪಿ ಹರೀಶ್ ಮತ್ತೊಮ್ಮೆ ಹೇಳಿದರು.
ಜಿಲ್ಲಾ ಪಂಚಾಯ್ತಿ ಕಚೇರಿ ಬಳಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಹೊಂದಾ ಣಿಕೆ ರಾಜಕೀಯದ ಬಗ್ಗೆ ಶಾಸಕ ಶಿವಗಂಗಾ ಬಸವರಾಜ್ ಹೇಳಿರುವುದಕ್ಕಿಂತ ಮುಂಚಿನಿಂ ದಲೂ ನಾನು ಹೇಳುತ್ತಾ ಬಂದಿದ್ದೇನೆ ಎಂದರು.
`ಪಾಪ’ ಮಾಡಿದವರ ಹೆಸರನ್ನು ಶಿವಗಂಗಾ ಬಸವರಾಜ್ ಬಹಿರಂಗ ಪಡಿಸಲಿ. ಈ ಒಳ ಒಪ್ಪಂದದಿಂದ ಬಿಜೆಪಿ ಸೋಲಿಸಿದವರಿಗೆ ಮುಂದಿನ ದಿನಗಳಲ್ಲಿ ಜನರು ಪಾಠ ಕಲಿಸುತ್ತಾರೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಕಾಂಗ್ರೆಸ್ ಶಾಸಕರಿಗೆ ಬೇಸರವಾಗಿದೆ. ಆ ಪಕ್ಷದ ಶಾಸಕರಿಗೇ ಅನುದಾನ ಕೊಡುತ್ತಿಲ್ಲ ಇನ್ನೂ ನಮಗೆಲ್ಲಿ ಕೊಡ್ತಾರೆ ಎಂದು ಉಸ್ತುವಾರಿ ಸಚಿವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.