ಹೊನ್ನನಾಯ್ಕನಹಳ್ಳಿ : ರೈತನ ಆತ್ಮಹತ್ಯೆ

ಹೊನ್ನನಾಯ್ಕನಹಳ್ಳಿ : ರೈತನ ಆತ್ಮಹತ್ಯೆ - Janathavaniಮಾಯಕೊಂಡ, ಅ.24- ರೈತ ಮಲ್ಲಿಕಾರ್ಜುನ  ಅವರು ಆತ್ಮಹತ್ಯೆಗೊಳಗಾದ ಘಟನೆ ಸಮೀಪದ ಹೊನ್ನ ನಾಯ್ಕನಹಳ್ಳಿಯಲ್ಲಿ ಗುರುವಾರ ನಡೆದಿದೆ.

ಸಾಲಬಾಧೆ ಮತ್ತು ಬೆಳೆಹಾನಿಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 3-4 ವರ್ಷಗಳಿಂದಲೂ ಬೆಳೆ ಹಾಳಾಗಿತ್ತು. ಈ ಬಾರಿ ಮಳೆ ಹೆಚ್ಚಾಗಿ, ನೀರು ನಿಂತು ಹತ್ತಿ ಬೆಳೆಯೂ ನಾಶವಾಗಿತ್ತು. ಬೆಳೆಗಾಗಿ ಐಡಿಎಫ್ ಸಿ ಬ್ಯಾಂಕಿನಲ್ಲಿ 2 ಲಕ್ಷ, ಗ್ರಾಮೀಣ ಒಕ್ಕೂಟದಲ್ಲಿ 70 ಸಾವಿರ, ಸೊಸೈಟಿಯಲ್ಲಿ 50 ಸಾವಿರ‌ ಜತೆಗೆ ಊರಲ್ಲಿ ಮಾಡಿದ 2 ಲಕ್ಷ ಸೇರಿ ಒಟ್ಟು 5 ಲಕ್ಷ ಸಾಲ ಮಾಡಿರುತ್ತಾರೆ. ಬೆಳೆ ಬಾರದ್ದರಿಂದ ಸಾಲ ತೀರಿಸಲಾಗದೆ ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು  ಅವರ ಮಗ ಅಜಯ್ ತಿಳಿಸಿದ್ದಾರೆ. ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

error: Content is protected !!