ಹರಪನಹಳ್ಳಿ : ಸತ್ತೂರಿನಲ್ಲಿ ಬಸ್ ಪಲ್ಟಿ, ಮಹಿಳೆ ಸಾವು

ಹರಪನಹಳ್ಳಿ, ಅ.22-  ಕೆಎಸ್ಸಾರ್ಟಿಸಿ ಬಸ್ ಪಲ್ಟಿಯಾಗಿ ಮಹಿಳೆ ಸಾವಿಗೀಡಾಗಿರುವ ಘಟನೆ ಸತ್ತೂರು  ಬಳಿ ಜರುಗಿದೆ. ದಾವಣಗೆರೆಯಿಂದ ಹರಪನಹಳ್ಳಿಗೆ ಹೋಗುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ಪಲ್ಟಿಯಾಗಿದೆ. ಸತ್ತೂರಿನ ಹನುಮಕ್ಕ (45)  ಮೃತಪಟ್ಟಿದ್ದು, ಉಳಿದಂತೆ 20 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆ ಸೇರಿಸಲಾಗಿದೆ.  

error: Content is protected !!