ಡೆಮೋ ವಿಶೇಷ ರೈಲುಗಳ ಸಂಚಾರ ರದ್ದು

ದಾವಣಗೆರೆ, ಅ.24- ತಾಂತ್ರಿಕ ಮತ್ತು ಕಾರ್ಯಾಚರಣೆಯ ಕಾರಣಗಳಿಂದಾಗಿ, ರೈಲು ಸಂಖ್ಯೆ 07395 ಬಳ್ಳಾರಿ-ದಾವಣಗೆರೆ ಡೆಮೊ ಸ್ಪೆಷಲ್, ರೈಲು ಸಂಖ್ಯೆ 07396 ದಾವಣಗೆರೆ-ಬಳ್ಳಾರಿ ಡೆಮೊ ಸ್ಪೆಷಲ್, ರೈಲು ಸಂಖ್ಯೆ 07397 ಹೊಸಪೇಟೆ-ಬಳ್ಳಾರಿ ಡೆಮೊ ಸ್ಪೆಷಲ್ ಮತ್ತು ರೈಲು ಸಂಖ್ಯೆ 07398 ಬಳ್ಳಾರಿ-ಹೊಸಪೇಟೆ ಡೆಮೊ ಸ್ಪೆಷಲ್ ರೈಲುಗಳನ್ನು ನಾಳೆ ದಿನಾಂಕ 25 ಮತ್ತು 26 ರಂದು ರದ್ದುಪಡಿಸಲಾಗಿದೆ ಮತ್ತು ರೈಲು ಸಂಖ್ಯೆ 07393 ಹೊಸಪೇಟೆ-ಎಸ್ಎಸ್ಎಸ್ ಹುಬ್ಬಳ್ಳಿ ಡೆಮೊ ಸ್ಪೆಷಲ್ ರೈಲನ್ನು ನಾಡಿದ್ದು ದಿನಾಂಕ 26, 2024 ರಂದು ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ, ಹುಬ್ಬಳ್ಳಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

error: Content is protected !!