ರಾಣೇಬೆನ್ನೂರು, ಅ.24- ಗೋವಾದ ಬಿಚ್ಚುಲಿಯ ಹೀರಾಬಾಯಿ ಸಭಾಂಗಣದಲ್ಲಿ ಇದೇ ದಿನಾಂಕ 27ರಂದು ನಡೆಯಲಿರುವ 15ನೇ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದ ಅಂಗವಾಗಿ, ಸಾಮಾಜಿಕ ಮತ್ತು ಧಾರ್ಮಿಕ ಸೇವೆಗೆ ನೀಡುವ `ಕರುನಾಡ ಪದ್ಮಶ್ರೀ’ ಪ್ರಶಸ್ತಿಗೆ ತಾಲ್ಲೂಕಿನ ಸಣ್ಣಸಂಗಾಪುರದ ಮಂಜಯ್ಯ ಚಾವಡಿ ಆಯ್ಕೆಯಾಗಿದ್ದಾರೆ.
ಗೋವಾದ ಬಿಚ್ಚುಲಿ ಕರ್ಮಭೂಮಿ ಕನ್ನಡ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಕರ್ನಾಟಕ ಜಾಗೃತಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪ್ರಶಸ್ತಿ ಪ್ರದಾನ ಮಾಡುವರು ಎಂದು ಜಾಗೃತಿ ವೇದಿಕೆ ಸಂಚಾಲಕ ಮಹೇಶ್ ಬಾಬು ಸುರವೇ ತಿಳಿಸಿದ್ದಾರೆ.