ಶಿಕ್ಷಣದಲ್ಲಿ ಧರ್ಮದ ಹಸ್ತಕ್ಷೇಪ ಆಗಬಾರದು : ಎಐಡಿಎಸ್‍ಓ

ದಾವಣಗೆರೆ, ಜ.10- ಧರ್ಮ ನಿರಪೇಕ್ಷ, ಪ್ರಜಾತಾಂತ್ರಿಕ ಶಿಕ್ಷಣ ಉಳಿಯಲಿ, ಶಿಕ್ಷಣ ದಲ್ಲಿ ಧರ್ಮದ ಹಸ್ತಕ್ಷೇಪ ಆಗಬಾರದು ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದ್ದಾರೆ.

ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣವನ್ನು ಅನು ಷ್ಠಾನಗೊಳಿಸುವ ಹೆಸರಲ್ಲಿ ಧಾರ್ಮಿಕ ಗುರು ಗಳು, ಮಠಾಧಿಪತಿಗಳೊಂದಿಗೆ ಸಭೆ ನಡೆಸಿ ರುವ ರಾಜ್ಯ ಸರ್ಕಾರದ ನಡೆಯನ್ನು ಎಐಡಿ ಎಸ್‍ಓ ಗಮನಿಸಿದ್ದು, ಬಲವಾಗಿ ಖಂಡಿಸು ತ್ತದೆ. ಸಭೆಯಲ್ಲಿ ಹಲವು ಆಘಾತಕಾರಿ ಶಿಫಾರಸ್ಸುಗಳು ಬಂದಿವೆ. ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ ಮತ್ತು ನೈತಿಕ ಶಿಕ್ಷಣ ಕೊಡುವುದೇ ಸರ್ಕಾರದ ಉದ್ದೇಶವಾಗಿದ್ದರೆ, ರಾಜ್ಯದ ಮತ್ತು ದೇಶದ ಜನತಾಂತ್ರಿಕ ಮನಸ್ಸುಳ್ಳ ಸಾಹಿತಿಗಳು, ಕವಿಗಳು, ವಿಜ್ಞಾನಿ ಗಳು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ನವೋದಯ ಚಳುವಳಿಯ ಹರಿಕಾರರ ಬೋಧನೆಗಳಿಂದ ಮೌಲ್ಯ ಅಳವಡಿಸಿಕೊಳ್ಳ ಬೇಕು ಎಂದಿದ್ದಾರೆ. ಧರ್ಮಾಂಧತೆ ಮತ್ತು ಸಾಂಪ್ರದಾಯಿಕತೆ ಇವೆರಡೂ ಕೂಡ ಸಾಂಸ್ಕೃತಿಕ ಸಹಬಾಳ್ವೆಗೆ ತೀವ್ರ ಅಡ್ಡಿಯುಂಟು ಮಾಡುತ್ತವೆ. ಧರ್ಮನಿರಪೇಕ್ಷ ಶಿಕ್ಷಣವನ್ನು ನೀಡುವುದೇ ಈ ಸಮಸ್ಯೆಗಳಿಗೆ ಸೂಕ್ತ ಪರಿ ಹಾರವಾಗಿದೆ. ತನಗೆ ಯಾವುದು ಪ್ರಯೋ ಜನವೋ ಆ ಆಹಾರವನ್ನು ಆಯ್ದುಕೊಳ್ಳುವ ಹಕ್ಕನ್ನು ಪ್ರತಿಯೊಬ್ಬ ವ್ಯಕ್ತಿಗೂ ನೀಡಬೇಕಾಗು ತ್ತದೆ. ಯಾರೇ ಆಗಲೀ ಇತರರ ಭಾವನೆಗಳಿಗೆ ಧಕ್ಕೆ ಉಂಟಾಗುವುದೆಂಬ ನೆಪವೊಡ್ಡಿ ಇನ್ನೊ ಬ್ಬರ ಆಚರಣೆಗೆ ತಡೆಯೊಡ್ಡಬಾರದು ಅಥವಾ ಹೇರಬಾರದು ಎಂದು ಆಗ್ರಹಿಸಿದ್ದಾರೆ. ಕಾರಣ ಸಭೆಯ ಶಿಫಾರಸ್ಸುಗಳನ್ನು ಅನುಷ್ಠಾನ ಗೊಳಿಸಲು ಸಮಿತಿಯನ್ನು ರಚಿಸುವ ಪ್ರಸ್ತಾವನೆಯನ್ನು ಸರ್ಕಾರ ಈ ಕೂಡಲೇ ಕೈ ಬಿಡಬೇಕು. ನೈಜ ಧರ್ಮ ನಿರಪೇಕ್ಷ ಹಾಗೂ ಪ್ರಜಾತಾಂತ್ರಿಕ ಶಿಕ್ಷಣವನ್ನು ಉಳಿಸಬೇಕೆಂದು ಎಐಡಿಎಸ್‍ಓ ಒತ್ತಾಯಿಸುತ್ತದೆ ಎಂದು ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ಹೇಳಿದ್ದಾರೆ.

error: Content is protected !!