ದಾವಣಗೆರೆ, ಜ.5- ನಗರದ ಕವಿ, ಕಾದಂಬರಿಕಾರ ಹಾಗೂ ಪತ್ರಕರ್ತ ಎಸ್. ಗುರುಬಸವರಾಜು ಅವರು ಹಾವೇರಿ ನಗರದಲ್ಲಿ ಜರುಗುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ.
ಜನವರಿ 7ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಪಾಪು- ಚಂಪಾ ವೇದಿಕೆಯಲ್ಲಿ ನಡೆಯುವ ಕವಿಗೋಷ್ಠಿ ಯಲ್ಲಿ ಕವನ ವಾಚನ ಮಾಡಲಿದ್ದಾರೆ.
ಪಾಪುಗುರು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಗುರುಬಸವರಾಜ್ ಈಗಾಗಲೇ `ಮುಳ್ಳೆಲೆಯ ಮದ್ದು’ ಎಂಬ ಕವನ ಸಂಕಲನ ಮತ್ತು ಸೂಜಿ ಎಂಬ ಕಾದಂಬರಿ ಪ್ರಕಟಿಸಿದ್ದಾರೆ. ಕಾಮ್ರೆಡ್ ಎಚ್.ಕೆ.ರಾಮಚಂದ್ರಪ್ಪನವರ ಸಂಸ್ಮರಣ ಗ್ರಂಥ “ಕೆಂಪು ಕಾಂಡದ ಹೂ” ಕೃತಿಯನ್ನು ಸಂಪಾದಿಸಿದ್ದಾರೆ. ಪಾಪುಗುರು ಅವರಿಗೆ ಲೇಖಿಕಾ ಪ್ರಶಸ್ತಿ, ಗುರುಕುಲ ಪ್ರಶಸ್ತಿ, ಹಿಂದುಸ್ತಾನ್ ರಿಪಬ್ಲಿಕನ್ ಪ್ರಶಸ್ತಿಗಳು ಲಭಿಸಿವೆ. ಪಾಪುಗುರು ಅವರನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನಾಗರಾಜ್ ಸಿರಿಗೆರೆ ಅಭಿನಂದಿಸಿದ್ದಾರೆ.