ದಾವಣಗೆರೆ, ಡಿ. 29 – ಪತ್ರಿಕಾ ವಿತರಕರ ಏಳಿಗೆಗಾಗಿ ಭವಿಷ್ಯದಲ್ಲಿ ಆರ್ಥಿಕ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಪತ್ತಿನ ಸಹಕಾರ ಸಂಘ ಸ್ಥಾಪಿಸಲು ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗರವರ ವಿಷಯ ಮಂಡನೆಗೆ ಸರ್ವ ಸದಸ್ಯರ ಒಮ್ಮತದ ನಿರ್ಣಯ ಅಂಗೀಕಾರವಾಯಿತು.
ತುಮಕೂರಿನ ಪತ್ರಿಕಾ ಭವನದಲ್ಲಿ ಕರೆದಿದ್ದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಸರ್ವ ಸದಸ್ಯರ ಸಭೆ ಯಲ್ಲಿ ಮಹತ್ತರ ತೀರ್ಮಾನಗಳು ಜರುಗಿದವು. ಅದರಲ್ಲಿ ಬಹು ಮುಖ್ಯವಾಗಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಲು ನಿರ್ಧರಿಸಲಾಯಿತು.
ಗೌರವಾಧ್ಯಕ್ಷರಾಗಿ ತುಮಕೂರಿನ ಸಿದ್ದಪ್ಪ, ಹಂಗಾಮಿ ಅಧ್ಯಕ್ಷರಾಗಿ ಮೈಸೂರಿನ ವಾಮದೇವ್ ಉಪಾಧ್ಯಕ್ಷರಾಗಿ ಬೆಂಗಳೂರಿನ ಗೋಪಾಲ್ ಕಾರ್ಯದರ್ಶಿಯಾಗಿ ಬೆಂಗಳೂ ರಿನ ಪ್ರಶಾಂತ್ ಕುಮಾರ್ ಖಜಾಂಚಿಯಾಗಿ ತುಮಕೂರಿನ ಚೆಲುವರಾಜ್ (ರಘು) ಆಯ್ಕೆ ಮಾಡಲಾಯಿತು.
ನಿರ್ದೇಶಕರಾಗಿ ದಾವಣಗೆರೆ ಕೃಷ್ಣಮೂರ್ತಿ, ಹಾವೇರಿಯ ಜಯಪ್ಪ ಬಣಕಾರ್, ಬಿಜಾಪುರದ ಗಣೇಶ್, ಚನ್ನರಾಯಪಟ್ಟಣದ ಪುಟ್ಟರಾಜು, ಧಾರವಾಡದ ಶಿವರಾಂ ಶಿರುಗುಪ್ಪಿ, ಚಾಮರಾ ಜನಗರದ ಪುರುಷೋತ್ತಮ್, ಬೆಳಗಾವಿಯ ನಾಮದೇವ ಕಳ್ಳಿಗುದ್ದಿ, ಚಿತ್ರದುರ್ಗದ ಪ್ರಶಾಂತ್, ಬೆಂಗಳೂರಿನ ಜಗದೀಶ್, ಯಲಹಂಕ ವೀರಭದ್ರ, ಬೆಂಗಳೂರಿನ ಸುಳ್ಯ ಸರ್ಕಲ್ ಸರವಣ, ತುಮಕೂರಿನ ರುದ್ರೇಶ್,
ಲೋಕೇಶ್ ಭದ್ರಾಚಾರ್, ತಿಪಟೂರಿನ ಪಾಂಡುರಂಗ, ಚಿಕ್ಕಮಗಳೂರಿನ ಅಭಿಲಾಶ್, ನೆಲಮಂಗಲದ ನಾಗರಾಜ್, ವಿಜಯನಗರದ ಅನಿಲ್ ಥೋರತ್ ಕೃಷ್ಣಪ್ಪ ಇಸರಗೊಂಡ, ಗಾಂಧಿನಗರದ ಶಿವಶಾಂತ್ ಕುಮಾರ್, ಶ್ರೀಧರ್, ಮಹಿಳಾ ಪ್ರತಿನಿಧಿಯಾಗಿ ವಿ.ಎ. ರಾಧಾಮಣಿ ಹಾಗೂ ಕಾನೂನು ಸಲಹೆಗಾರರನ್ನಾಗಿ ಹುಲುಕುಂಟೆ ಮಹೇಶ್ ಅವರನ್ನು ಆಯ್ಕೆ ಮಾಡಲಾಯಿತು.