ಬಿಜೆಪಿ ಮೂಲ ಕಾರ್ಯಕರ್ತರ ವೇದಿಕೆ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ವತಿಯಿಂದ ವಾಜಪೇಯಿ ಜಯಂತಿ

ಬಿಜೆಪಿ ಮೂಲ ಕಾರ್ಯಕರ್ತರ ವೇದಿಕೆ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ವತಿಯಿಂದ ವಾಜಪೇಯಿ ಜಯಂತಿ - Janathavaniದಾವಣಗೆರೆ,ಡಿ 29-  ಬಿಜೆಪಿ ಮೂಲ ಕಾರ್ಯಕರ್ತರ ವೇದಿಕೆ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ವತಿಯಿಂದ ಜನವರಿ 13 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಎ.ಬಿ. ವಾಜಪೇಯಿ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಅಧ್ಯಕ್ಷ ಎಂ.ಪಿ. ಕೃಷ್ಣಮೂರ್ತಿ ಪವಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಗೆ ರಾಜ್ಯ ನಾಯಕರನ್ನು ಆಹ್ವಾನಿಸಲಾಗುವುದು. ಉಳಿದಂತೆ ಮಾಜಿ ಸಚಿವರು, ಮಾಜಿ ಶಾಸಕರು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದ ಅವರು, ಹಲವು ವಿಚಾರಗಳ ಕುರಿತು ತಜ್ಞರು ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯಾಗಿ ರಾಮಜ್ಯೋತಿ ಯಾತ್ರೆಯಲ್ಲಿ ಹುತಾತ್ಮರಾದ 8 ಕುಟುಂಬಗಳಿಗೆ ಮತ್ತು ಕರಸೇವೆ ವೇಳೆ ಜೈಲಿಗೆ ಹೋಗಿ ಬಂದ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಗೌರವ ನಿಧಿ ನೀಡಲಾಗುವುದು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೃಷ್ಣಮೂರ್ತಿ ಪವಾರ್ ಇಲ್ಲವೇ ಹೆಚ್.ಎಸ್. ಲಿಂಗರಾಜ್ ಅವರನ್ನು ನೇಮಕ ಮಾಡಬೇಕೆಂದರು. ಲೋಕಸಭಾ ಚುನಾವಣೆ ಹಿನ್ನೆೆಲೆಯಲ್ಲಿ ಪಕ್ಷವನ್ನು ಸಂಘಟನೆ ಮಾಡಲು ಮೂಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಬಲಿಷ್ಠಗೊಳಿಸಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ಜೆ. ಸೋಮನಾಥ್, ಆರ್. ಪ್ರತಾಪ್, ಶಿವಶಂಕರ್, ಹೆಚ್.ಎಸ್. ಲಿಂಗರಾಜ್, ಸರೋಜ ದೀಕ್ಷಿತ್, ಪ್ರಭಾವತಿ ಹಾಲಪ್ಪ, ಮಾಲತೇಶ್ ಗುಪ್ತ, ರೇಣುಕಾ ಬಣಕಾರ್, ಕೃಷ್ಣಮೂರ್ತಿ  ದೀಕ್ಷಿತ್, ಬಸವರಾಜ್ ಬಣಕಾರ್, ರಾಮಚಂದ್ರಪ್ಪ, ಬೆಣ್ಣೆ  ದೋಸೆ ರವಿಕುಮಾರ್, ಮಟ್ಟಿಕಲ್ಲು ವೀರಭದ್ರಸ್ವಾಮಿ ಮತ್ತಿತರರಿದ್ದರು.

error: Content is protected !!