ದಾವಣಗೆರೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಯು.ಡಿ.ಐ.ಡಿ.ಗಾಗಿ ಅರ್ಜಿ ಸಲ್ಲಿಸಿ ತಪಾಸಣೆಗೆ ಹಾಜರಾಗದಿರುವ ವಿಕಲಚೇತನರಿಗಾಗಿ ಯು.ಡಿ.ಐ.ಡಿ. ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ದಿನಾಂಕ 23 ರಂದು ಚನ್ನಗಿರಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಯು.ಡಿ.ಐ.ಡಿ. ತಪಾಸಣಾ ಶಿಬಿರವನ್ನು ಆಯೋಜಿಸಿದ್ದು, ನಿಗದಿತ ದಿನಗಳಂದು ಆಯಾ ತಾಲ್ಲೂಕಿನ ವಿಕಲಚೇತನರು ಶಿಬಿರದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ಎಂ.ಆರ್.ಡಬ್ಲ್ಯೂ ಗಳಾದ ಶೈಲಜಾ ಕೆ.ಎಂ.(ಹೊನ್ನಾಳಿ) ಮೊ. 9886366809, ಕೆ.ಸುಬ್ರಮಣ್ಯಂ (ಚನ್ನಗಿರಿ) ಮೊ.9945738141, ಎಂ.ಕೆ ಶಿವನಗೌಡ (ಜಗಳೂರು)ಮೊ. 9902105734, ಶಶಿಕಲಾ.ಟಿ (ಹರಿಹರ) ಮೊ. 9945458058, ಚನ್ನಪ್ಪ ಬಿ. (ದಾವಣಗೆರೆ) ಮೊ. 9590829024 ಇವರನ್ನು ಸಂಪರ್ಕಿಸಲು ಜಿಲ್ಲಾ ಯು.ಡಿ.ಐ.ಡಿ ನೋಡಲ್ ಅಧಿಕಾರಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ. ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.
January 10, 2025