ನಾಗರ ಪಂಚಮಿ ಪ್ರಯುಕ್ತ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರಿಂದ ಪ್ರಾರಂಭಗೊಂಡಿರುವ, `ಕಲ್ಲು ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು’ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮವು ಬಿಜೆಎಂ ಶಾಲೆಯಲ್ಲಿ ಇಂದು ನಡೆಯಲಿದೆ. ಪಿಎಲ್ಇ ಟ್ರಸ್ಟ್, ಬಿಜೆಎಂ ಸ್ಕೂಲ್ ಮತ್ತು ಜಿಎನ್ಬಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಹಿಸುವರು. ಡಾ.ಸುರೇಶ್ ಹಿಟ್ನಾಳ್ ಉದ್ಘಾಟಿಸುವರು. ಮೇಯರ್ ವಿನಾಯಕ ಬಿ.ಹೆಚ್. ಮತ್ತು ಪಾಲಿಕೆ ಸದಸ್ಯ ಉದಯಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸುವರು.
January 17, 2025