ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡದಂತೆ ಮುಂಜಾಗ್ರತೆ ಕ್ರಮವಹಿಸಲು ಮನವಿ

ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡದಂತೆ ಮುಂಜಾಗ್ರತೆ ಕ್ರಮವಹಿಸಲು ಮನವಿ

ಹರಪನಹಳ್ಳಿ, ಆ. 12- ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನವಾಗದಂತೆ ಹಾಗೂ ಸರ್ಕಾರ ನಿಷೇಧಿಸಿರುವ ಪ್ಲಾಸ್ಟಿಕ್ ಧ್ವಜಗಳನ್ನು ಮಾರಾಟ ಮಾಡದಂತೆ ತಡೆಗಟ್ಟಲು ಮುಂಜಾಗೃತೆವಾಗಿ ಕ್ರಮವಹಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಪದಾಧಿಕಾರಿಗಳು ತಹಶೀಲ್ದಾರ್‍ರವರಿಗೆ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಹಿಂದೂ ಜನಜಾಗೃತಿ ಸಮಿತಿ ಮುಖಂಡ ಶಿವಾನಂದ ಹುಲೇನರ್ ಮಾತನಾಡಿ, ನಮ್ಮ ರಾಷ್ಟ್ರಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತವಾಗಿದೆ. ಆಗಸ್ಟ್ 15 ಮತ್ತು ಜನವರಿ 26 ರಂದು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸಿಸಲಾಗುತ್ತದೆ, ಆದರೆ ಅದೇ ದಿನ ಕಾಗದದ/ಪ್ಲಾಸ್ಟಿಕ್‍ನ ಸಣ್ಣ-ಸಣ್ಣ ರಾಷ್ಟ್ರಧ್ವಜಗಳು ರಸ್ತೆಗಳು, ಕಸ ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ, ಪ್ಲಾಸ್ಟಿಕ್ ಧ್ವಜಗಳು ಬೇಗನೇ ನಾಶವಾಗುವುದಿಲ್ಲ, ಆದ್ದರಿಂದ ಅನೇಕ ದಿನಗಳವರೆಗೆ ರಾಷ್ಟ್ರಧ್ವಜಗಳ ಅವಮಾನವನ್ನು ನೋಡಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಚಿದಾನಂದ, ಮಹಾಂತೇಶ್, ಮೋಹನ್, ಪ್ರವೀಣ್ ಬಣಕಾರ, ನೇತ್ರಕುಮಾರ, ಸತೀಶ್ ಸೇರಿದಂತೆ ಇತರರು ಇದ್ದರು.

error: Content is protected !!