ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ `ಜನಸೇವಾ ಶಿರೋಮಣಿ’ ಬಿರುದು ಪ್ರದಾನ
ಶ್ರೀ ಅಭಿನವ ರೇಣುಕ ಮಂದಿರದಲ್ಲಿ ನಡೆಯುತ್ತಿರುವ ರಂಭಾಪುರಿ ಪೀಠದ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ 25ನೇ ವರ್ಷದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮೋತ್ತೇಜಕ ಕಾರ್ಯಕ್ರಮದಲ್ಲಿ ಇಂದಿನ ಸಮಾರಂಭದ ವಿವರ.
ಇಂದು ಸಂಜೆ 6.30ಕ್ಕೆ ಏರ್ಪಾಡಾಗಿರುವ ಧರ್ಮೋ ತ್ತೇಜಕ ಸಮಾರಂಭದ ನೇತೃತ್ವವನ್ನು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು (ಗುರುಪಾದೇಶ್ವರ ಮಠ-ಮರಿಯಮ್ಮನಹಳ್ಳಿ) ವಹಿಸುವರು. ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು (ಪಂಚಗೃಹ ಹಿರೇಮಠ- ಅಮ್ಮಿನಭಾವಿ) ಉಪದೇಶಾಮೃತ ನೀಡುವರು.
ಇದೇ ಸಂದರ್ಭದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ `ಜನಸೇವಾ ಶಿರೋಮಣಿ’ ಬಿರುದಿನೊಂದಿಗೆ ಗೌರವ ಶ್ರೀರಕ್ಷೆ, ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಜಿಲ್ಲಾ ಮದ್ವೀರಶೈವ ಸದ್ಭೋದನಾ ಸಂಸ್ಥೆ ಅಧ್ಯಕ್ಷ ದೇವರಮನೆ ಶಿವಕುಮಾರ್, ಶ್ರೀ ಜಗದ್ಗುರು ರೇಣುಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದೇವರಮನೆ ಶಿವರಾಜ್ ತಿಳಿಸಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಅಕ್ಕಮಹಾದೇವಿ ಸಮಾಜದ ಅಧ್ಯಕ್ಷರಾದ ಶ್ರೀಮತಿ ಕಂಚಿಕೇರಿ ಸುಶೀಲಮ್ಮ, ಮಹಿಳಾ ಸಮಾಜದ ಅಧ್ಯಕ್ಷರಾದ ನೀಲಗುಂದ ಜಯಮ್ಮ, ಡಿಹೆಚ್ಯುಸಿ ಬ್ಯಾಂಕ್ ಉಪಾಧ್ಯಕ್ಷರಾದ ಶ್ರೀಮತಿ ಜಯಮ್ಮ ಬಿ.ಹೆಚ್. ಪರಶುರಾಮಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್ ಜಾಧವ್, ವೀರಶೈವ ಸಮಾಜದ ಮುಖಂಡರಾದ ಶ್ರೀಮತಿ ದೊಗ್ಗಳ್ಳಿ ಸುವರ್ಣಮ್ಮ, ಅ.ಭಾ.ವೀ.ಲಿಂ. ಮಹಾಸಭಾ ಮಹಿಳಾ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ರಾಧೇಶ್ ಜಂಬಗಿ, ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ನ ನಿರ್ದೇಶಕರಾದ ಶ್ರೀಮತಿ ಅಂದನೂರ ಅರ್ಚನ ರುದ್ರಮುನಿ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.