ದಾವಣಗೆರೆ, ಆ.10- ನಗರದ ಬಾಪೂಜಿ ವಿದ್ಯಾಸಂಸ್ಥೆಯ ಎಸ್.ಎಸ್. ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ನ ಮಾನಸಿಕ ಆರೋಗ್ಯ ವಿಭಾಗದಲ್ಲಿ ಉಪನ್ಯಾಸಕ ಎಂ. ಸಿದ್ದೇಶ್ ಅವರು ಗುಜರಾತ್ನ ಸುಮನದೀಪ ವಿದ್ಯಾಪೀಠ ವಿಶ್ವವಿದ್ಯಾನಿಲಯದಲ್ಲಿ ಮೊನ್ನೆ ಜರುಗಿದ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದರು.
ಹೊನ್ನಾಳಿ ತಾಲ್ಲೂಕು, ಕೂಲಂಬಿ ಗ್ರಾಮದ ತಟ್ಟೇರ ಮುರುಗೇಶಪ್ಪ ಟಿ.ಜಿ. ಮತ್ತು ಶ್ರೀಮತಿ ಮಂಜುಳಮ್ಮ ದಂಪತಿ ಪುತ್ರ ಸಿದ್ದೇಶ್ ಎಂ. ಅವರು `ಡಿಟರ್ಮಿಂಟ್ ಆಫ್ ಸ್ಟ್ರೆಸ್ ಅಂಡ್ ಕೋಪಿಂಗ್ ಸ್ಟ್ರಾಟರ್ಜಿಸ್, ಇಂಟರ್ ವೆನ್ಷನ್, ರೆಕಮೆಂಡೇಷನ್ಸ್ ಟು ಎನೆನ್ಸ್ ಸ್ಟ್ರೆಸ್ ರಿಲೀಫ್ ಅಂಡ್ ಡಿಸಿಷನ್ ಮೇಕಿಂಗ್ ಅಮಾಂಗ್ ಅಡಲ್ಷಂಟ್ಸ್ ಶಿವಮೊಗ್ಗ ಕರ್ನಾಟಕ’ ಎಂಬ ವಿಷಯದಲ್ಲಿ ಡಾ. ರವೀಂದ್ರ ಎಚ್.ಎನ್. ಮತ್ತು ಡಾ. ಅನಿತಾ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.