ದಾವಣಗೆರೆ, ಆ. 10- ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಯಕ್ಷರಂಗ ಯಕ್ಷಗಾನ ಸಂಸ್ಥೆಯ ಅಧ್ಯಕ್ಷರಾಗಿ ಮಲ್ಯಾಡಿ ಪ್ರಭಾಕರ ಶೆಟ್ಟಿ ಅವರು ಕಲಾಕುಂಚ ಕಛೇರಿ ಸಭಾಂಗಣದಲ್ಲಿ ಈಚೆಗೆ ನಡೆದ ಸರ್ವ ಸದಸ್ಯರ ಮಹಾಸಭೆಯಲ್ಲಿ ಅವಿರೋಧವಾಗಿ ಪುನರಾಯ್ಕೆ ಯಾಗಿದ್ದಾರೆ ಎಂದು ಸಂಸ್ಥೆಗಳ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಗೌರವ ಅಧ್ಯಕ್ಷ ಬಿ.ಶಾಂತಪ್ಪ ಪೂಜಾರಿ, ಕೆ.ಹೆಚ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷ್ ಕುಮಾರ ಶೆಟ್ಟಿ, ಖಜಾಂಚಿ ನೀಲಾವರ ಭಾಸ್ಕರ ನಾಯಕ್, ಯಕ್ಷಗಾನ ತರಬೇತಿ ನಿರ್ದೇಶಕ, ವೃತ್ತಿನಿರತ ಖ್ಯಾತ ಯಕ್ಷಗಾನ ಕಲಾವಿದ ಹಟ್ಟಿಯಂಗಡಿ ಆನಂದ ಶೆಟ್ಟಿ, ಸಂಚಾಲಕರಾಗಿ ಪ್ರದೀಪ್ ಕಾರಂತ್, ಸಹ ಸಂಚಾಲಕರಾಗಿ ನೂಜೀ ಹರೀಶ್ ಶೆಟ್ಟಿ, ಸಂಘಟನಾ ಕಾರ್ಯ ದರ್ಶಿಯಾಗಿ ಎಂ.ಎಸ್.ಪ್ರಸಾದ್, ಸಮಿತಿ ಸದಸ್ಯ ರಾಗಿ ಶ್ರೀಮತಿಯರಾದ ಹೇಮಾ ಶಾಂತಪ್ಪ ಪೂಜಾರಿ, ಜ್ಯೋತಿ ಗಣೇಶ್ಶೆಣೈ, ಸುಧಾ ಸಂತೋಷ್, ಶ್ರೀಪತಿ ನಾಯಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಖಜಾಂಚಿ ನೀಲಾವರ ಭಾಸ್ಕರ ನಾಯಕ್ ಲೆಕ್ಕಪತ್ರ ಮಂಡಿಸಿ, ಅನುಮೋದಿಸಿದರು. ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಪ್ರಾರ್ಥಿಸಿದರು. ಪ್ರದೀಪ್ ಕಾರಂತ್ ಸ್ವಾಗತಿ ಸಿದರು. ಎಂ.ಎಸ್.ಪ್ರಸಾದ್ ವಂದಿಸಿದರು.