ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂತಿಮ ಘಟ್ಟವಾಗಿ ಮೇರಿ ಮಾತಿ ಮೇರಾ ದೇಶ್ ಪರಿಕಲ್ಪನೆಯಡಿ ದೇಶಾದ್ಯಂತ ಇಂದಿನಿಂದ ಇದೇ ದಿನಾಂಕ 15 ರವರೆಗೆ ಸರ್ವೋಚ್ಛ ತ್ಯಾಗಗೈದ ಭಾರತ ಮಾತೆಯ ವೀರ ಪುತ್ರರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ವೀರ ಪುತ್ರರಿಗೆ ಗೌರವ ಅರ್ಪಿಸಿ, ಅವರ ಸ್ಮರಣಾರ್ಥ ಶಿಲಾಫಲಕಂ ಸ್ಥಾಪಿಸುವ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಸ್ವಾತಂತ್ರ್ಯ ಹೋರಾಟಗಾರರು ಸೇನೆಯ ಶೌರ್ಯ ಪ್ರಶಸ್ತಿ ವಿಜೇತರು, ಸಶಸ್ತ್ರ ಪಡೆಗಳ ಹುತಾತ್ಮ ವೀರ ನಾರಿಯರು, ಸೈನಿಕರು ಮತ್ತು ಮಾಜಿ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಾಲತಾಣ https://yuva.gov.in./meri_maati_mera_desh ಸಂಪರ್ಕಿಸಲು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಚೇರಿ, ಉಪನಿರ್ದೇಶಕ (ಪ್ರಭಾರ) ಡಾ. ಸಿ.ಎ. ಹಿರೇಮಠ ತಿಳಿಸಿದ್ದಾರೆ.