ದಾವಣಗೆರೆ, ಆ.9- ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಶ್ರಾವಣ ಮಾಸದ ಪ್ರಯುಕ್ತ ರಾಜ್ಯ ಮಟ್ಟದ `ಶ್ರಾವಣ ಶ್ರವಣ’ ಕವನ ಸ್ಪರ್ಧೆಯನ್ನು ಉಚಿತವಾಗಿ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಶ್ರಾವಣದ ಕುರಿತು 20 ರಿಂದ 25 ಸಾಲುಗಳಲ್ಲಿ ಕವನ ಬರೆದು ಸ್ಪರ್ಧಿಗಳು ಕನ್ನಡದಲ್ಲಿ ಪೂರ್ಣ ಪ್ರಮಾಣದ ವಿಳಾಸ, ವ್ಯಾಟ್ಸಾಪ್ ಸಂಖ್ಯೆ, ಭಾವಚಿತ್ರದೊಂದಿಗೆ `ಶ್ರಾವಣ ಶ್ರವಣ’ ಕವನ ಸ್ಪರ್ಧೆ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಕನ್ನಡ ಕೃಪಾ, ಕುವೆಂಪು ರಸ್ತೆ, ಕಸ್ತೂರ್ಬಾ ಬಡಾವಣೆ, ದಾವಣಗೆರೆ-577002 ಈ ವಿಳಾಸಕ್ಕೆ ಅಂಚೆ ಮೂಲಕ ಆಗಸ್ಟ್ 10 ರೊಳಗೆ ತಲಪುವಂತೆ ಕಳಿಸಬೇಕು. ಆಂಗ್ಲ ಭಾಷೆಯಲ್ಲಿ ವಿಳಾಸವಿದ್ದರೆ ಕವನ ಸ್ವೀಕರಿಸುವುದಿಲ್ಲ ಎಂದು ಕಲಾಕುಂಚದ ಅಧ್ಯಕ್ಷ ಕೆ.ಹೆಚ್. ಮಂಜುನಾಥ್ ತಿಳಿಸಿದ್ದಾರೆ. ವಿವರಕ್ಕೆ 9481986868 ಈ ಸನಿಹ ವಾಣಿಗೆ ಸಂಪರ್ಕಿಸ ಬಹುದು.