ಭರಮಸಾಗರ, ಆ. 4 – ತಾಲ್ಲೂಕಿನ ಎಲ್ಲಾ ಅರ್ಹತೆಯನ್ನು ಹೊಂದಿರುವ ಭರಮಸಾಗರ ಅಂಚೆ ಇಲಾಖೆಗೆ ನೂತನವಾಗಿ ನಿರ್ಮಿಸಿರುವ ಕಟ್ಟಡದ ಉದ್ಘಾಟನಾ ಸಮಾರಂಭವು ನಾಡಿದ್ದು ದಿನಾಂಕ 6 ರ ಭಾನುವಾರ ನಡೆಯಲಿದೆ.
ಈ ಕಟ್ಟಡವು 110×80 ಅಡಿಗಳ ಅಳತೆಯುಳ್ಳ ಜಾಗದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ಶಿಲಾನ್ಯಾಸ ನೇರವೇರಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಎಂ. ಚಂದ್ರಪ್ಪ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಎಸ್. ರಾಜೇಂದ್ರ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಮಂಜುಳಮ್ಮ ಕರಿಬಸಪ್ಪ ಭಾಗವಹಿಸುವರು. ಚಿತ್ರದುರ್ಗದ ಅಂಚೆ ಅಧೀಕ್ಷಕ ಓ. ವಿರೂಪಾಕ್ಷಪ್ಪ ಸಮಾರಂಭದ ಅಧ್ಯಕ್ಷತೆ ವಹಿಸುವರು.
ಇದೇ ಸಂದರ್ಭದಲ್ಲಿ ನೂತನ ಅಂಚೆ ಇಲಾಖೆಯ ಖಾಲಿ ಸ್ಥಳದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ಥಳೀಯ ಅಂಚೆ ಪಾಲಕರು ಜಿ.ಹೆಚ್ ಸುರೇಶ್ ತಿಳಿಸಿದ್ದಾರೆ.