ಹರಿಹರ, ಆ. 4 – ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ವರ್ಗಾವಣೆ ಪರ್ವ ಆರಂಭವಾಗಿದ್ದು, ಅಧಿಕಾರಿಗಳು ಈ ಪ್ರಕ್ರಿಯೆಯಲ್ಲೇ ತೊಡ ಗಿಕೊಂಡು ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ.
ತಾಲ್ಲೂಕಿನ ಹಲವಾರು ಅಧಿಕಾರಿಗಳು ತಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲು ರಾಜಧಾನಿಯಲ್ಲಿ ಠಿಕಾಣಿ ಹೂಡಿದ್ದಾರೆ.
ಇತ್ತೀಚೆಗೆ ತಹಶೀಲ್ದಾರ್ ಪೃಥ್ವಿ ಸಾನಿಕಂ ಹಾಗೂ ಬಿಇಒ ಹನುಮಂತಪ್ಪ ವರ್ಗಾವಣೆ ಮಾಡಲಾಗಿತ್ತು. ನಂತರ ಸಾನಿಕಂ ಅವರು ನ್ಯಾಯಾಲಯದ ಮೊರೆ ಹೋಗಿ ಮತ್ತೆ ಇದೇ ಹುದ್ದೆಗೆ ವಾಪಸ್ಸಾಗಿದ್ದಾರೆ. ಬಿಇಒ ಹನುಮಂತಪ್ಪ ಅವರೂ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಪೊಲೀಸ್, ಆರೋಗ್ಯ, ಉಪ ನೋಂದಣಿ ಇಲಾಖೆ, ಪಿಡಬ್ಲ್ಯೂಡಿ ಸೇರಿದಂತೆ ಹಲವಾರು ಇಲಾಖೆಗಳ ಅಧಿಕಾರಿಗಳು ವರ್ಗಾವಣೆ ಚಿಂತನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.