ಎಸ್.ಕೆ.ಪಿ.ರಸ್ತೆಯಲ್ಲಿರುವ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ 67ನೇ ವರ್ಷದ 1008 ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯ ಕ್ರಮವು ಇಂದು ನಡೆಯಲಿದೆ ಎಂದು ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್. ಪ್ರಭಾಕರ್ ತಿಳಿಸಿದ್ದಾರೆ
ಲೋಕಕಲ್ಯಾಣಾರ್ಥ ಹಾಗೂ ಸರ್ವರ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸಿ, ಏರ್ಪಡಿಸಿರುವ ಈ ಪೂಜಾ ಕಾರ್ಯಕ್ರಮದಲ್ಲಿ ಇಂದು ಬೆಳಿಗ್ಗೆ 7 ರಿಂದ ವಿವಿಧ ಪೂಜಾ ಕಾರ್ಯಗಳು ಆರಂಭವಾಗಲಿದ್ದು, ಬೆಳಿಗ್ಗೆ 8.45 ರಿಂದ ಮಹಾ ಗಣಪತಿ ಪೂಜಾ, ಶ್ರೀ ನವಗ್ರಹ ಪೂಜಾ, ಶ್ರೀ ಸತ್ಯನಾರಾ ಯಣಸ್ವಾಮಿ ವ್ರತ ಪೂಜಾ, ಕಥಾ ಶ್ರವಣ, ಮಹಾಮಂಗಳಾರತಿ ನಡೆಯಲಿದೆ. ಸಂಜೆ 7 ರಿಂದ ಶ್ರೀ ಸತ್ಯನಾರಾಯಣ ಸ್ವಾಮಿಗೆ ರಥಾರೋಹಣ, ಉಯ್ಯಾಲೆ ಸೇವೆ,ಮಂತ್ರ – ಪುಷ್ಪ ಅಷ್ಟಾವಧಾನ ನಡೆಸಲಾಗುವುದು. ಸರ್ವ ಭಕ್ತಾಧಿಗಳು ಪೂಜಾ ಕಾರ್ಯ ಕ್ರಮ ಗಳಲ್ಲಿ ಭಾಗವಹಿಸುವಂತೆ ಸಂಘದ ಕಾರ್ಯಾಧ್ಯಕ್ಷ ಕಾಸಲ್ ಎಸ್.ಸತೀಶ್ ಕೋರಿದ್ದಾರೆ.
ಸರ್ವ ಸದಸ್ಯರ ಸಭೆ : ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಂಘದ ಸರ್ವ ಸದಸ್ಯರ ಸಭೆಯು ಇಂದು ಸಂಜೆ 5 ಗಂಟೆಗೆ ಸಂಘದ ಅಧ್ಯಕ್ಷ ಆರ್.ಎಲ್.ಪ್ರಭಾಕರ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕಾಸಲ್ ಎಸ್.ವಿಠ್ಠಲ್ ಶ್ರೀಮತಿ ಸುನಂದಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ರವೀಂದ್ರಗುಪ್ತ ತಿಳಿಸಿದ್ದಾರೆ.