ರೋಟರಿ ಭಾನಭವನದಲ್ಲಿ ಇಂದು ಸಂಜೆ 5 ಗಂಟೆಗೆ `ಏಕರೂಪ ನಾಗರಿಕ ಸಂಹಿತೆ’ ಸಂವಾದ ಏರ್ಪಡಿಸಲಾಗಿದೆ. ಅಧ್ಯಕ್ಷತೆಯನ್ನು ಹಿರಿಯ ವಕೀಲ, ಅಧಿವಕ್ತಾ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಎಲ್. ದಯಾನಂದ್ ವಹಿಸುವರು. ಕಾರ್ಯಕ್ರಮವನ್ನು ಆರ್.ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಸ್. ಯತೀಶ್ ಉದ್ಘಾಟಿಸುವರು. ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ವಕೀಲರೂ ಆದ ಅಧಿವಕ್ತಾ ಪರಿಷತ್‌ನ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಎನ್.ಹೆಗಡೆ ಆಗಮಿಸುವರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲರುಗಳಾದ ಡಿ.ಎನ್. ಬಸವರಾಜ್, ಮಂಜುನಾಥ ದೊಡ್ಡಮನಿ ಉಪಸ್ಥಿತರಿರುವರು. ಸಂವಾದವು ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ (ದಾವಣಗೆರೆ ವಿಭಾಗ), ಹರಿಹರ, ದಾವಣಗೆರೆ ತಾಲ್ಲೂಕು ಅಧಿವಕ್ತಾ ಪರಿಷತ್ ಘಟಕದ ಸಂಯುಕ್ತಾಶ್ರಯದಲ್ಲಿ ನಡೆಯಲಿದೆ.
February 23, 2025