ಕೋಳಿ ಫಾರಂಗಳ ಮಾಲೀಕರಿಗೆ ನೋಟೀಸ್ ಜಾರಿ

ದಾವಣಗೆರೆ, ಆ.3- ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿರುವ ಕೋಳಿ ಫಾರಂಗಳ ಮಾಲೀಕರು ಹಾಗೂ ವ್ಯವಸ್ಥಾಪಕರಿಗೆ ಫಾರಂಗಳಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಲು ಮತ್ತು ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಲು ನೋಟಿಸ್ ಜಾರಿ ಮಾಡಲಾಗಿದೆ.

ತಾಲ್ಲೂಕಿನ ವಿವಿಧ ಗ್ರಾಮಗಳ ಕೋಳಿ ಫಾರಂಗಳಿಗೆ ಉಪ ನಿರ್ದೇಶಕರು, ತಾಂತ್ರಿಕ ಸಹಾಯಕರು ಪಶುವೈದ್ಯ ತಜ್ಞರು ಹಾಗೂ ಪಶುವೈದ್ಯರೊಂದಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಭೇಟಿ ನೀಡಿದ್ದು, ಫಾರ್ಮ್‍ಗಳಲ್ಲಿ ಕಂಡುಬಂದಿರುವ ನ್ಯೂನ್ಯತೆ ಗಳನ್ನು ಸರಿಪಡಿಸಲು ಮತ್ತು ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಲು ಮತ್ತು ತಾಂತ್ರಿಕವಾಗಿ ಹಲವು ಸಲಹಾ ಸೂಚನೆಗಳನ್ನು ಒಂದು ವಾರದೊಳಗಡೆ ಅಳವಡಿಸಿಕೊಂಡು ನೊಣಗಳ ಹಾವಳಿಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಫಾರಂ ಮಾಲೀಕರು, ವ್ಯವಸ್ಥಾಪಕರಿಗೆ  ಸೂಚಿಸಲಾಗಿದೆ.

ಮರು ಪರಿಶೀಲನೆ ಮಾಡಿದಾಗ ನೊಣಗಳ ಹಾವಳಿಯನ್ನು ನಿಯಂತ್ರಿಸುವಲ್ಲಿ ವಿಫಲವಾದಲ್ಲಿ ಅಂತಹ ಕೋಳಿಫಾರಂಗಳನ್ನು ಮುಚ್ಚಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

error: Content is protected !!