ಹರಿಹರದಲ್ಲಿ ಕಾರ್ಗಿಲ್ ವಿಜಯೋತ್ಸವ

ಹರಿಹರ, ಜು. 27 – ನಗರದಲ್ಲಿ ಸೈನಿಕರ ಸಂಘ ಮತ್ತು ವಿವಿಧ ಸಂ ಘಟನೆಗಳ ವತಿಯಿಂದ ಕಾರ್ಗಿಲ್ ಯುದ್ಧದ ಸಮಯದಲ್ಲಿ ಮರಣ ಹೊಂದಿರುವ ಯೋಧರ ಸ್ಮರಣೆ, ವಿಜಯೋತ್ಸವ ಮತ್ತು ಪಂಜಿನ ಮೆರವಣಿಗೆ ಮಾಡಲಾಯಿತು.

ಪಂಜಿನ ಮೆರವಣಿಗೆ ಶಿವಮೊಗ್ಗ ರಸ್ತೆಯ ಗ್ರಾಮದೇವತೆ ದೇವಸ್ಥಾನ ಮುಂಭಾಗದಿಂದ ಆರಂಭಗೊಂಡು ರಾಣಿ ಚೆನ್ನಮ್ಮ ವೃತ್ತ, ಮುಖ್ಯರಸ್ತೆಯಲ್ಲಿ ಸಂಚರಿಸಿ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಅಂತ್ಯಗೊಂಡಿತು. 

ಈ ವೇಳೆ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ದೇಶದ ರಕ್ಷಣೆ ಮಾಡುವ ಯೋಧರ ಕಾರ್ಯ ಅವಿಸ್ಮರಣೀಯ. ಸೈನಿಕರ ತ್ಯಾಗದಿಂದ ದೇಶದ ಪ್ರಜೆಗಳು ನೆಮ್ಮದಿ ಜೀವನ ಕಳೆಯುವುದಕ್ಕೆ ದಾರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಾಲಿ ಮತ್ತು ನಿವೃತ್ತ ಯೋಧರು, ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.

error: Content is protected !!