ನಗರದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ದಾವಣಗೆರೆ, ಜು. 26- ನಗರದ ಪಿ.ಬಿ. ರಸ್ತೆಯಲ್ಲಿರುವ ಹೋಂಡಾ ಶೋ ರೂಂ ಎದುರು ಫುಟ್‌ಪಾತ್ ಜಾಗದಲ್ಲಿ ಸುಮಾರು 60-65 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ನಿನ್ನೆ ಪತ್ತೆಯಾಗಿದೆ.

ಗೋದಿ ಮೈ ಬಣ್ಣ, ತೆಳ್ಳನೆಯ ದೇಹ, ಮುಖ ಹಾಗೂ ತಲೆಯಲ್ಲಿ ಬಿಳಿ ಕೂದಲು, ಬಿಳಿ ಮತ್ತು ನೀಲಿ ಬಣ್ಣದ ಚೌಕಳಿ ಶರ್ಟ್ ಧರಿಸಿದ್ದ ಅಪರಿಚಿತ ಶವದ ವಾರಸುದಾರರು ಇದ್ದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ (08192-262688, 9480803251, 08192-259293) ಯನ್ನು ಸಂಪರ್ಕಿಸಬಹುದು.

error: Content is protected !!