ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 9.30 ಗಂಟೆಗೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ವಿದ್ಯಾರ್ಥಿ ಮತ್ತು ಉಪನ್ಯಾಸಕರ ವೇದಿಕೆ ಉದ್ಘಾಟನೆ ಹಾಗೂ ಎಂಬಿ ಟ್ಯಾಲೆಂಟ್ ಹಂಟ್‌ನ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಡಾ. ಜಿ.ಎನ್.ಹೆಚ್ ಕುಮಾರ್ ಉದ್ಘಾಟಿಸುವರು. ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಸಂಗಮೇಶ್ವರ ಗೌಡರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ದೇವರಾಜ್ ಸಿ.ಹೆಚ್. ಆಗಮಿಸುವರು. ಡಾ. ಎಸ್. ಪ್ರಸಾದ್ ಬಂಗೇರ ಉಪಸ್ಥಿತರಿರುವರು.