4700 ರೂ. ಮೌಲ್ಯದ ಗಾಂಜಾ ವಶ

ಹರಿಹರ, ಜು. 23- ನಗರದ ಸಾರ್ವಜನಿಕ ಆಸ್ಪತ್ರೆ ಪಕ್ಕದ ವಿದ್ಯಾನಗರ ಎ ಬ್ಲಾಕ್‌ ರಸ್ತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 4700 ರೂ. ಮೌಲ್ಯದ 94.44 ಗ್ರಾಂ. ಗಾಂಜಾ ಸೊಪ್ಪನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಆರೋಪಿತರಾದ ಹರಿಹರ ನಗರದ ಮಹಮದ್ ಜಮಾಲುದ್ದೀನ್ ಯಾನೆ ಜಾಹೀದ್, ದಾವಣಗೆರೆ ಶಿವ ನಗರದ ಸಾದತ್ ಬಾಷಾ ಇವರನ್ನು ದಸ್ತಗಿರಿ ಮಾಡಿದ್ದು, ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!