ಉಜ್ಜನಪ್ಪ‌ ನಿಧನಕ್ಕೆ ಪ್ರೊ|| ಎಸ್.ಬಿ.‌ ರಂಗನಾಥ್ ಸಂತಾಪ

ದಾವಣಗೆರೆ, ಜು. 21- ಎ.ಆರ್. ಉಜ್ಜನಪ್ಪನವರ ಹಠಾತ್ ನಿಧನದಿಂದ‌ ತೀವ್ರ ಆಘಾತ ಉಂಟಾಗಿದೆ ಎಂದು ಅವಿಭಜಿತ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ. ಎಸ್.ಬಿ. ರಂಗನಾಥ್ ಹೇಳಿದ್ದಾರೆ. ಅವರೊಬ್ಬ ಸರಳ,ಸಜ್ಜನ, ಸ್ನೇಹ ಜೀವಿಯಾಗಿದ್ದ ರೆಂಬುದನ್ನು ಕಳೆದ ಮೂವತ್ತು ವರ್ಷಗಳ ಅವರ ಜೊತೆಗಿನ ಆಪ್ತ ಒಡನಾಟದಿಂದ ಕಂಡುಕೊಂಡಿದ್ದೇನೆ ಎಂದು ಅವರು ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !!