ಕರವೇ ರಾಜ್ಯಾಧ್ಯಕ್ಷ ಅವಿನಾಶ್ ಸೇರಿ ಮೂವರ ಮೇಲೆ ದೂರು

ದಾವಣಗೆರೆ, ಜು. 21- 50 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟು, ದೂರು ನೀಡುವುದಾಗಿ ಬೆದರಿಸಿದ್ದಾರೆಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅವಿನಾಶ್ ಸೇರಿದಂತೆ ಮೂವರ ಮೇಲೆ ವಿದ್ಯಾನಗರ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಂಗನಾಥ ಬಡಾವಣೆಯ ಶ್ರೀಮತಿ ಲಕ್ಷ್ಮೀ ಅವರು ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಮನೆ ನಿರ್ಮಿಸಿಕೊಡಲು ಮೇಸ್ತ್ರಿ ವಿಜಯಕುಮಾರ್ ಅವರಿಗೆ ಗುತ್ತಿಗೆ ನೀಡಿದ್ದು, ಹೆಚ್ಚು ಹಣ ಪಡೆದಿದ್ದರೂ ಆವರು ಕೆಲಸ ಪೂರ್ಣಗೊಳಿಸಿರಲಿಲ್ಲ.

ಜುಲೈ 16ರಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡ ಅವಿನಾಶ್ ಎಂಬ ವ್ಯಕ್ತಿ ಕರೆ ಮಾಡಿ, ನಿಮ್ಮ ಬಿಲ್ಡಿಂಗ್‌ನಲ್ಲಿ ಕೆಲಸ ಮಾಡುವ ಯಾರೋ ಒಬ್ಬ ವ್ಯಕ್ತಿ ಬಿದ್ದಿದ್ದಾನೆ. ಅವನಿಗೆ ಪೆಟ್ಟು ಬಿದ್ದಿದೆ. ಅವನು ದಲಿತನಾಗಿದ್ದು, ನಿಮ್ಮ ಮೇಲೆ ಕೇಸ್ ಹಾಕಿಸುತ್ತಾನೆ. ನನಗೆ 50 ಸಾವಿರ ರೂ. ಕೊಟ್ಟರೆ ಸೆಟ್ಲ್ ಮೆಂಟ್ ಮಾಡಿಸುತ್ತೇನೆ ಎಂದು ಮೇಸ್ತ್ರಿ ವಿಜಯಕುಮಾರ್, ಶಿವಕುಮಾರ್ ಜೊತೆ ಸೇರಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ನಾನು ಒಪ್ಪಿರಲಿಲ್ಲ. ಅದೇ ದಿನ ಅವರು ವಿದ್ಯಾನಗರ ಠಾಣೆಗೆ ಬಂದ ಕಟ್ಟಡದ ಮೇಲಿನಿಂದ ಬಿದ್ದಿದ್ದಾನೆಂದು ವ್ಯಕ್ತಿಯೊಬ್ಬನ ಮಗನ ಕೈಯಿಂದ ಸುಳ್ಳು ದೂರು ಕೊಡಿಸಿದ್ದಾರೆ ಎಂದು ಲಕ್ಷ್ಮಿ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

error: Content is protected !!