`ವಿಶ್ವ ಛಾಯಾಗ್ರಾಹಕರ ದಿನಾಚರಣೆ’ ಅದ್ಧೂರಿಯಾಗಿ ಆಚರಿಸಲು ನಿರ್ಧಾರ

ದಾವಣಗೆರೆ, ಜು.19-   `ವಿಶ್ವ ಛಾಯಾಗ್ರಾಹಕರ ದಿನಾಚರಣೆ’ ಕುರಿತಂತೆ     ಚರ್ಚಿಸಲು ತಾಲ್ಲೂಕು ಫೋಟೋಗ್ರಾಫರ್ ಯೂತ್ ವೆಲ್‍ಫೇರ್ ಅಸೋಸಿಯೇಷನ್   ಸರ್ವ ಸದಸ್ಯರ ಪೂರ್ವಭಾವಿ ಸಭೆ ನಡೆದು, ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ನೂತನ ಅಧ್ಯಕ್ಷ  ಶ್ರೀನಾಥ್.ಪಿ ಅಗಡಿ ಅವರನ್ನು ಸನ್ಮಾನಿಸಲಾಯಿತು

ಬರುವ ಆಗಸ್ಟ್ 19ರಂದು ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಸಹಕರಿಸಬೇಕು. ಈ ವರ್ಷವೂ ಸಹ ಛಾಯಾಗ್ರಾಹಕರಿಗೆ ಪ್ರವಾಸ ಮತ್ತು ಛಾಯಾಗ್ರಾಹಕರ ಕುಟುಂಬಗಳಿಗೆ ಗ್ರಾಮೀಣ ಕ್ರೀಡೆಗಳನ್ನು ಹಾಗೂ ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷ ಶ್ರೀನಾಥ್  ತಿಳಿಸಿದರು.

 ಇದೇ ಸಂದರ್ಭದಲ್ಲಿ ನಗರದ ಛಾಯಾಗ್ರಾಹಕರ ಸಹಕಾರ  ಸದಸ್ಯರಿಗೆ  ಮಾಜಿ ಅಧ್ಯಕ್ಷ  ಶಿಕಾರಿ ಶಂಭು ಯಶಸ್ವಿನಿ ಕಾರ್ಡನ್ನು   ವಿತರಿಸಿದರು.  ಪಂಚಾಕ್ಷರಯ್ಯ, ಕಿಶೋರ್‍ಕುಮಾರ್, ಶಶಿಕುಮಾರ್.ಡಿ.ಬಿ,  ಈ ಮೂವರನ್ನು  ತಾಲ್ಲೂಕು  ಸಂಘದ   ನಿರ್ದೇಶಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. 

ಹೊಸ ಲುಮ್ಯಾಕ್ಸ್  ಕ್ಯಾಮೆರಾ ಬಗ್ಗೆ ಕಾರ್ಯಾಗಾರವನ್ನು ರಘು ನಡೆಸಿಕೊಟ್ಟರು.   ಜಿಲ್ಲಾಧ್ಯಕ್ಷ  ವಿಜಯಕುಮಾರ್ ಜಾಧವ್,  ಸಹಕಾರ ಸಂಘದ ಅಧ್ಯಕ್ಷ  ತಿಪ್ಪೇಸ್ವಾಮಿ, ಕಾರ್ಯದರ್ಶಿ ದುಗ್ಗೇಶ್ ಕಡೇಮನೆ, ಖಜಾಂಚಿ ಮಲ್ಲಿಕಾರ್ಜುನ್, ಸಂಚಾಲಕ  ಮಿಥುನ್, ಮಹಾಂತೇಶ್, ಮಾಜಿ ಅಧ್ಯಕ್ಷ ಎಚ್.ಕೆ.ಸಿ.ರಾಜು ಉಪಸ್ಥಿತರಿದ್ದರು. 

ರುದ್ರಮ್ಮ ಮತ್ತು ನಿರ್ಮಲ  ಪ್ರಾರ್ಥನೆ ಮಾಡಿದರು. ಏಕನಾಥ್ ತಿಲಕ್ ಸ್ವಾಗತಿಸಿದರು.   ತಿಪ್ಪೇಸ್ವಾಮಿ ನಿರೂಪಿಸಿದರು,   ಕಿರಣ್  ವಂದಿಸಿದರು.

error: Content is protected !!