ಉಕ್ಕಡಗಾತ್ರಿಯಲ್ಲಿ ಆಷಾಢ- ಅಧಿಕ ಶ್ರಾವಣ ಮಾಸದ ಪೂಜೆ

ಉಕ್ಕಡಗಾತ್ರಿಯಲ್ಲಿ ಆಷಾಢ- ಅಧಿಕ ಶ್ರಾವಣ ಮಾಸದ ಪೂಜೆ

ದಾವಣಗೆರೆ, ಜು. 19-    ಶ್ರೀ ಕ್ಷೇತ್ರ ಬಿದ್ದ ಹನುಮಪ್ಪನಮಟ್ಟಿ ಕಂಚಿಕೇರಿ ಗುರುಗಳಾದ   ಶ್ರೀ ಬಸವರಾಜ ಗುರೂಜಿ ಯವರು ಶ್ರೀ ಗುರು ಕರಿಬಸವೇಶ್ವರ ಗದ್ದಿಗೆ ಇರುವಂತಹ  ಉಕ್ಕಡಗಾತ್ರಿ ಕ್ಷೇತ್ರಕ್ಕೆ ಆಗಮಿಸಿ, ಶ್ರೀ ಶೋಭಕೃತ್ ಸಂವತ್ಸರದ ಆಷಾಢ-ಅಧಿಕ ಶ್ರಾವಣ ಮಾಸದ ಶುಭ ಸೋಮವಾರ ಪೂಜೆ ನೆರವೇರಿಸಿದರು.  

ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಭಕ್ತರಾದ ಶ್ರೀಮತಿ ಬಿ. ಹುಲಿಗೆಮ್ಮನವರು   ನಿಸ್ವಾರ್ಥ ಸೇವೆಯನ್ನು ಮಾಡುತ್ತಾ, ಈ ಕುಟುಂಬಕ್ಕೆ ಶ್ರೀ ವೀರಾಂಜನೇಯ ಸ್ವಾಮಿಯು ಸದಾ ಕಾಪಾಡುತ್ತಿರಲೆಂದು ಹಾರೈಸಿ,   ಶ್ರೀ ಬಸವರಾಜ ಗುರುಗಳು  ಸನ್ಮಾನಿಸಿದರು. ಈ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ ನಾಗರಾಜ ಬಿ. ಕಡ್ಲೆಬಾಳು, ಗುರುಸಿದ್ದಯ್ಯ ಸ್ವಾಮಿ ಉಜ್ಜಿನಿ, ವಿ.ಹುಲುಗಪ್ಪ ಉಪನಾಯಕನಹಳ್ಳಿ, ಬೈಲಪ್ಪ ಹೆಚ್, ಕಡ್ಲೆಬಾಳು, ರಮೇಶ್ ಅವರುಗಳಿಗೂ ಗುರುಗಳು ಆಶೀರ್ವದಿಸಿದರು.  ಕಾರ್ಯಕ್ರಮದಲ್ಲಿ ಕವಿತಾ, ಕರಿಬಸಮ್ಮ ಕಡ್ಲೆಬಾಳು, ಸಂತೋಷ್ ಕುಮಾರ್ ಬಿ. ಹಾಗೂ ಇತರೆ ಭಕ್ತಾಧಿಗಳು ಹಾಜರಿದ್ದರು.

error: Content is protected !!