ಕುರಿ, ಮೇಕೆ ಘಟಕಕ್ಕೆ ಅರ್ಜಿ ಆಹ್ವಾನ

ದಾವಣಗೆರೆ, ಜು.17-   ಕುರಿ ಮತ್ತು ಉಣ್ಣೆ ಅಭಿವೃದ್ದಿ ಜಿಲ್ಲಾ ನಿಗ ಮದ ವತಿಯಿಂದ  ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋ ಜನೆಯಡಿ (6+1) ಕುರಿ, ಮೇಕೆ ಘಟಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ನಿಗಮದಲ್ಲಿ ನೋಂದಾಯಿತರಾದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 18-60 ವರ್ಷ ವಯೋಮಿತಿಯ ಮಹಿಳಾ ಸದಸ್ಯರು ಅಥವಾ ಮಹಿಳಾ ಸದಸ್ಯರು ಇಲ್ಲವಾದಲ್ಲಿ ಪುರುಷ ಸದಸ್ಯರು ಅರ್ಜಿ ಸಲ್ಲಿಸಬಹುದು. 

ಅರ್ಜಿ ಸಲ್ಲಿಸಲು ಇದೇ ದಿನಾಂಕ 25 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ತಾಲ್ಲೂಕು ಮುಖ್ಯ ಪಶು ವೈದ್ಯಾಧಿಕಾರಿಗಳು (ಆಡಳಿತ) ಪಶು ಆಸ್ಪತ್ರೆ ಸಂಪರ್ಕಿಸಬಹುದು.

error: Content is protected !!