1,110 ರೌಡಿ ಶೀಟರ್‌ಗಳು
ದಾವಣಗೆರೆ, ಜು. 17- ಜಿಲ್ಲೆಯಲ್ಲಿ 1,110 ರೌಡಿ ಶೀಟರ್‌ಗಳು ಇರುವುದಾಗಿ ಎಸ್ಪಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
2022ರವರೆಗೆ 1496 ರೌಡಿಶೀಟರ್‌ಗಳಿದ್ದರು. ಪ್ರಸಕ್ತ ವರ್ಷ 6 ಜನರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಹಾಗೂ ಈ ವರ್ಷ 392 ಜನರನ್ನು ಕಾಯ್ದೆಯಿಂದ ಕೈ ಬಿಡಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.
ದಾವಣಗೆರೆ, ಜು. 17- ಪ್ರಸಕ್ತ ವರ್ಷ ಜುಲೈ 16ರವರೆಗೆ ಅಬಕಾರಿ ಕಾಯ್ದೆ ಉಲ್ಲಂಘನೆಯಡಿ 122 ಪ್ರಕರಣಗಳು ದಾಖಲಾಗಿದ್ದು, 112 ಜನರನ್ನು ಬಂಧಿಸಲಾಗಿದೆ. 8.15 ಲಕ್ಷ ರೂ. ಮೌಲ್ಯದ 2125 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಡಾ.ಅರುಣ್ ಮಾಹಿತಿ ನೀಡಿದ್ದಾರೆ.
2019ರಲ್ಲಿ ಇದೇ ಕಾಯ್ದೆಯಡಿ 166, 2020ರಲ್ಲಿ 99, 2021ರಲ್ಲಿ 107, 2022ರಲ್ಲಿ 168 ಪ್ರಕರಣಗಳು ದಾಖಲಾಗಿದ್ದವು ಎಂದವರು ತಿಳಿಸಿದ್ದಾರೆ.
1910 ಟನ್ ಮರಳು ವಶ: ಈ ವರ್ಷ ಅಕ್ರಮ ಮರಳು ಸಾಕಾಣಿಕೆ ಹಾಗೂ ಅಕ್ರಮ ದಾಸ್ತಾನಿಗೆ ಸಂಬಂಧಿಸಿದಂತೆ 60 ಪ್ರಕರಣಗಳು ದಾಖಲಾಗಿವೆ. 63 ಆರೋಪಿಗಳನ್ನು ಬಂಧಿಸಿದ್ದು, 21 ಲಾರಿ, 28 ಟ್ರ್ಯಾಕ್ಟರ್ ಹಾಗೂ 5 ಇತರೆ ವಾಹನಗಳು ಸೇರಿ ಒಟ್ಟು 54 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ 18.99 ಲಕ್ಷ ರೂ. ಮೌಲ್ಯದ 1910.55 ಟನ್ ಮರಳು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಡಾ.ಅರುಣ್ ತಿಳಿಸಿದ್ದಾರೆ.
2019ರಲ್ಲಿ 289 ಟನ್, 2020ರಲ್ಲಿ 1077, 2021ರಲ್ಲಿ 803.03 ಟನ್ ಮರಳು ವಶಪಡಿಸಿಕೊಳ್ಳಲಾಗಿತ್ತು. 2022ರಲ್ಲಿ 57 ಪ್ರಕರಣಗಳನ್ನು ದಾಖಲಿಸಿ 488.50 ಟನ್ ಅಕ್ರಮ ಮರಳು ವಶಕ್ಕೆ ಪಡೆಯಲಾಗಿತ್ತು ಎಂದು ಹೇಳಿದ್ದಾರೆ.
3 ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ: 2023ರ ಜುಲೈ 16ರವರೆಗೆ ಮೂರು ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ದಾಖಲಾಗಿದ್ದು, 7 ಜನರನ್ನು ಬಂಧಿಸಲಾಗಿದೆ. 13050 ರೂ. ವಶಪಡಿಸಿಕೊಳ್ಳಲಾಗಿದೆ. ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದಂತೆ 85 ಪ್ರಕರಣಗಳು ದಾಖಲಾಗಿದ್ದು, 106 ಜನರನ್ನು ಬಂಧಿಸಿ, ಅವರಿಂದ 2.04 ಲಕ್ಷ ರೂ. ವಶ ಪಡಿಸಿಕೊಳ್ಳಲಾಗಿದೆ.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿಯೇ ಈ ವರ್ಷ 92 ಮಟ್ಕಾ ಪ್ರಕರಣ, 151 ಜೂಜಾಟ ಪ್ರಕರಣ ಹಾಗೂ 8 ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು ವರದಿಯಾಗಿವೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.