ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಜವಳಿ ವರ್ತಕ ನೀಲಿ ಉಮೇಶ್

ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಜವಳಿ ವರ್ತಕ ನೀಲಿ ಉಮೇಶ್

ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಜವಳಿ ವರ್ತಕ ನೀಲಿ ಉಮೇಶ್ - Janathavani

ದಾವಣಗೆರೆ, ಜು.14- ನಗರದ ಲಯನ್ಸ್ ಕ್ಲಬ್‌ನ ನೂತನ 2023-24ನೇ ಸಾಲಿನ ಅಧ್ಯಕ್ಷರಾಗಿ ಜವಳಿ ವರ್ತಕ ನೀಲಿ ಉಮೇಶ್ ಆಯ್ಕೆಯಾಗಿದ್ದಾರೆ.

ನೀಲಿ ಉಮೇಶ್, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿ. ನೀಲಿ ಹನುಮಂತಪ್ಪ ಮತ್ತು ದಿ. ಶ್ರೀಮತಿ ನಾಗಮ್ಮ ದಂಪತಿ ನಾಲ್ಕನೇ ಪುತ್ರ. ಪೂಜಾ ಡ್ರೆಸ್ ಲ್ಯಾಂಡ್ ಮಾಲೀಕರಾದ ಉಮೇಶ್, ತಮ್ಮ ಉದ್ಯಮದ ಜೊತೆಗೆ, ಸಾಮಾಜಿಕ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದು, ಇದೀಗ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿದ್ದಾರೆ.

ಕಾರ್ಯದರ್ಶಿಯಾಗಿ ಭೀಮಾನಂದ ಶೆಟ್ಟಿ, ಖಜಾಂಚಿಯಾಗಿ ಕೆ.ಟಿ. ಮಹಾಲಿಂಗಪ್ಪ, ಸಹ ಕಾರ್ಯದರ್ಶಿಯಾಗಿ ಎಂ.ಎನ್. ಅಮಿತ್ ಆಯ್ಕೆಯಾಗಿದ್ದಾರೆ. ಡಾ. ಬಿ.ಎಸ್. ನಾಗಪ್ರಕಾಶ್, ಆರ್.ಜಿ. ಶ್ರೀನಿವಾಸ್ ಮೂರ್ತಿ, ಅಜ್ಜಂಪುರ ಶೆಟ್ರು ಮೃತ್ಯುಂಜಯ, ಎಸ್.ಓಂಕಾರಪ್ಪ ಸಲಹೆಗಾರರಾಗಿದ್ದಾರೆ.

ಉಪಾಧ್ಯಕ್ಷ ರುಗಳಾಗಿ ಎಸ್.ಜಿ. ಉಳುವಯ್ಯ, ಎನ್.ಸಿ. ಬಸವರಾಜ್, ಮಹಾಂತೇಶ್ ವಿ. ಒಣರೊಟ್ಟಿ, ಟೇಮರ್ ಆಗಿ ಪ್ರವೀಣ್ ರಾವ್ ಎಂ. ಪವಾರ್,  ಟೈಲ್ ಟ್ವಿಸ್ಟರ್ ಆಗಿ ಯರಿಸ್ವಾಮಿ, ಸಂಪರ್ಕಾಧಿಕಾರಿ ಯಾಗಿ ಎನ್.ವಿ.ಬಂಡಿವಾಡ, ಟ್ವಿಸ್ಟ್ ಪ್ರೋಗ್ರಾಮ್ ಚೇರ್ಮನ್ ಆಗಿ ಸಿ. ಅಜಯ್ ನಾರಾಯಣ್, ಸದಸ್ಯತ್ವ ಸಮಿತಿ ಚೇರ್ಮನ್ ಆಗಿ ಬೆಳ್ಳೂಡಿ ಶಿವಕುಮಾರ್, ಕ್ಲಬ್ ವಿಸ್ತರಣಾ ಸಮಿತಿ ಚೇರ್ಮನ್ ಆಗಿ ಕೆ.ಎಸ್. ಸಂತೋಷ್ ಕುಮಾರ್, ಕ್ಲಬ್ ಮಾರ್ಕೆಟಿಂಗ್ ಚೇರ್ಮನ್ ಆಗಿ ಹೆಚ್.ವಿ. ಮಂಜುನಾಥಸ್ವಾಮಿ, ಎಲ್‌ಸಿಐಎಫ್ ಕೋ-ಆರ್ಡಿನೇಟರ್ ಚೇರ್ಮನ್ ಆಗಿ ಎ.ಎನ್. ಮದನ್ ಕುಮಾರ್, ಪ್ರಚಾರ ಸಮಿತಿ ಚೇರ್ಮನ್ ಆಗಿ ಇ.ಎಂ. ಮಂಜುನಾಥ, ಲಿಯೋ ಚೇರ್ಮನ್ ಆಗಿ ಎಂ.ಎಸ್. ಉದಯ್ ಕುಮಾರ್ ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳು : ಬಿ.ವಿ.ಗಂಗಪ್ಪ ಶೆಟ್ಟಿ, ಹೆಚ್.ಸಿ. ರವಿಶಂಕರ್ ವಾಲಿ, ಜಂಬಗಿ ರಾಧೇಶ್, ಎನ್.ಕೆ.ಕೊಟ್ರೇಶ್, ಕೋರಿ ಶಿವಕುಮಾರ್, ಸಜ್ಜನ್ ನಾಗರಾಜ್, ಆರ್. ಆನಂದ ಕಂದ, ಪಿ.ಹೆಚ್. ಗೋವಿಂದರಾಜ್, ಮುರುಗೇಶ್ ಬಣಕಾರ್, ಆರ್.ಎನ್. ನಾಗೇಂದ್ರ, ಮಾಳಗಿ ಷಣ್ಮುಖಪ್ಪ, ಗುಂಡಾಲ್ ಮಂಜುನಾಥ್, ಬಿ.ಎಸ್. ಶಿವಾನಂದ, ಎಂ. ಬಸವರಾಜಪ್ಪ, ಹೆಚ್.ಎಂ. ನಾಗರಾಜ್, ಕೆ.ವಿ. ರಂಗನಾಥ ಶೆಟ್ಟಿ, ಎಂ.ಎನ್. ಮುರುಳೀಧರ ಗುಪ್ತ, ಮಾಳಗಿ ಕೊಟ್ರೇಶ್, ಟಿ.ವಿ. ಸುಬ್ಬರಾಜು, ಪಿ.ಸಿ. ಜಗದೀಶ್ ಕುಮಾರ್,  ಹೆಚ್.ಕೆ. ಹೇಮಣ್ಣ, ಸೋಗಿ ಮುರುಗೇಶ್, ಡಾ. ಸುರೇಶ್, ಜೆ.ವಿ. ಬದರಿನಾಥ್, ಜಯದೇವ ಜೆ. ಚಿಗಟೇರಿ.

ಪದಗ್ರಹಣ : ದಾವಣಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿರುವ ನೀಲಿ ಉಮೇಶ್ ಅವರ ನೇತೃತ್ವದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಾಳೆ ದಿನಾಂಕ 15ರ ಶನಿವಾರ ಸಂಜೆ 6.30ಕ್ಕೆ ಚೌಕಿಪೇಟೆಯಲ್ಲಿರುವ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ದಾವಣಗೆರೆ ಲಯನ್ಸ್ ಕ್ಲಬ್ ಪ್ರಥಮ ಮಹಿಳೆ ಶ್ರೀಮತಿ ನೀಮಾ ನೀಲಿ ಉಮೇಶ್ ಅವರು, ಲಯನ್ಸ್ ಕ್ಲಬ್ ಹಾಲಿ ಅಧ್ಯಕ್ಷ ಎನ್.ಆರ್. ನಾಗಭೂಷಣರಾವ್ ಅವರ ಅಧ್ಯಕ್ಷತೆ ಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜಿಲ್ಲಾ ಲಯನ್ಸ್ 317ಸಿ ಮಾಜಿ ರಾಜ್ಯಪಾಲ ಜಯಕರ್ ಶೆಟ್ಟಿ ಇಂದ್ರಾಳಿ ಅವರು ನೂತನ ಪದಾಧಿಕಾರಿಗಳನ್ನು ಪ್ರತಿಷ್ಠಾಪಿಸುವರು. 

ಜಿಲ್ಲಾ ಲಯನ್ಸ್ 317 ಬಿ ಮಾಜಿ ರಾಜ್ಯಪಾಲರಾದ ಶ್ರೀಮತಿ ಸುಗ್ಗಲಾ ಯಲಮಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಜಿಲ್ಲಾ ಲಯನ್ಸ್ ಮಾಜಿ ರಾಜ್ಯಪಾಲ ಡಾ. ಬಿ.ಎಸ್. ನಾಗಪ್ರಕಾಶ್, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಎಸ್. ಓಂಕಾರಪ್ಪ ಅತಿಥಿಗಳಾಗಿದ್ದಾರೆ.

error: Content is protected !!