ಶ್ರೀ ಶಿವಾನಂದ ತೀರ್ಥ ಗುರು ಅಧ್ಯಾತ್ಮ ಮಂದಿರ, ಶ್ರೀ ರಾಜನಹಳ್ಳಿ ಹರಿಹರಪ್ಪ ಟ್ರಸ್ಟ್ ವತಿಯಿಂದ ಜಯದೇವ ಸರ್ಕಲ್ನಲ್ಲಿರುವ ಶ್ರೀ ಶಿವಾನಂದ ತೀರ್ಥಗುರು ಅಧ್ಯಾತ್ಮ ಮಂದಿರದಲ್ಲಿ ಶ್ರೀಮತ್ಪರಮಹಂಸೇತ್ಯಾದಿ ಶ್ರೀ ಶಿವಾನಂದ ತೀರ್ಥಗುರುಗಳವರ ಜಯಂತ್ಯೋತ್ಸವವನ್ನು ಇಂದು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 6 ಗಂಟೆಗೆ ಶ್ರೀ ಗುರುಗಳವರ ಪಾದುಕೆಗೆ ಕಾಕಡಾರತಿ, ಮಂಗಳಸ್ನಾನ, ಶ್ರೀ ಗಣಪತಿ ಸ್ಮರಣೆ, ಶ್ರೀ ವೀರಾಂಜನೇಯ ಸ್ವಾಮಿ ಪೂಜೆ, ಬೆಳಿಗ್ಗೆ 9.30 ಕ್ಕೆ ಶ್ರೀ ಗುರುಗಳವರ ಪಾದುಕೆಗೆ ಲಘು ನ್ಯಾಸಪೂರ್ವಕ ಲಘುನ್ಯಾಸಪೂರ್ವಕ ಏಕಾದಶವರ್ತನ ರುದ್ರಾಭಿಷೇಕ, 11.30 ಕ್ಕೆ ಶ್ರೀ ಶಿವಾನಂದ ತೀರ್ಥಗುರುಗಳವರ ನಿರೂಪಣೆ ಮತ್ತು ತೊಟ್ಟಿಲೋತ್ಸವ, ಮಧ್ಯಾಹ್ನ 1 ಗಂಟೆಗೆ ಅಷ್ಟಾವಧಾನ, ವೇದಘೋಷ, ಮಂತ್ರಪುಷ್ಪ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯುವುದು. ಸಂಜೆ 6 ಗಂಟೆಗೆ ಶ್ರೀ ವಾಸವಿ ಭಜನಾ ಮಂಡಳಿಯಿಂದ ಭಜನೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯುವುದು.
ಕಾರ್ಯಕ್ರಮವನ್ನು ಧರ್ಮಪ್ರಕಾಶ ದಿ. ರಾಜನಹಳ್ಳಿ ರಾಮಶ್ರೇಷ್ಠಿ ಯವರ ಸುಪುತ್ರಿ ದಿ. ಶ್ರೀಮತಿ ಸಿ.ವಿ. ಸುನಂದಮ್ಮನವರ ಹೆಸರಿನಲ್ಲಿ ಮತ್ತು ದಿ. ಶ್ರೀಮತಿ ಬ್ಯಾಡಿಗಿ ಜಯಲಕ್ಷ್ಮಮ್ಮ, ದಿ. ವಿರುಪಾಕ್ಷಪ್ಪ ಶ್ರೇಷ್ಠಿ ಇವರ ಹೆಸರಿನಲ್ಲಿ ಮತ್ತು ಶ್ರೀ ರಾಜನಹಳ್ಳಿ ಗೋಪಾಲಕೃಷ್ಣ ಶೆಟ್ಟಿ ಇವರ ಜ್ಞಾಪಕಾರ್ಥವಾಗಿ ಶ್ರೀಮತಿ ರಾಜನಹಳ್ಳಿ ಕಾಂತಲಕ್ಷ್ಮಮ್ಮ ಮತ್ತು ಮಕ್ಕಳ ಹೆಸರಿನಲ್ಲಿ ಶ್ರೀ ರಾಜನಹಳ್ಳಿ ಹರಿಹರಪ್ಪ ಟ್ರಸ್ಟ್ನಿಂದ ನಡೆಸಲಾಗುವುದು.