ದಾವಣಗೆರೆ, ಜು.14- ತಾಲ್ಲೂಕಿನ ಬಾಡ ಗ್ರಾಮ ಪಂಚಾಯಿತಿ ಆವರಣದಲ್ಲಿ ನಾಡಿದ್ದು ದಿನಾಂಕ 16 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ನಿಜ ಸುಖಿ ಹಡಪದ ಅಪ್ಪಣ್ಣನವರ 889ನೇ ಜಯಂತ್ಯೋತ್ಸವವನ್ನು ಶ್ರೀ ಹಡಪದ ಅಪ್ಪಣ್ಣ ಸೇವಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದೆ.
ಸಾನ್ನಿಧ್ಯವನ್ನು ಶ್ರೀ ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಮಹಾ ಸ್ವಾಮೀಜಿ, ಸುಕ್ಷೇತ್ರ ತಂಗಡಗಿ ಮಠ, ಮುದ್ದೇಬಿಹಾಳ್ ತಾ. ಇವರು ವಹಿಸುವರು. ಕಾರ್ಯಕ್ರಮವನ್ನು ಶಾಸಕ ಕೆ.ಎಸ್. ಬಸವಂತಪ್ಪ ಉದ್ಘಾಟಿಸುವರು. ಬಿ.ಎನ್. ಮಹಾರುದ್ರಪ್ಪ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಡಾ. ಎನ್.ಜೆ. ಶಿವಕುಮಾರ್ ಅನುಭಾವ ನಡೆಸಿ ಕೊಡುವರು.