ದಾವಣಗೆರೆ, ಜು. 14- ಇ-ಸ್ಟೋರ್ ಮಾಡುವುದಾಗಿ ಹೇಳಿ ಹಲವರಿಂದ 2 ಕೋಟಿ ರೂ.ಗೂ ಹೆಚ್ಚು ಹಣ ವಂಚನೆ ಕುರಿತಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಡಾ. ಅರುಣ್ ಕುಮಾರ್ ಕೆ. ಹೇಳಿದ್ದಾರೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಹಣ ವಂಚನೆಯ ದೂರು ದಾಖಲಾಗಿತ್ತು. ಆದರೆ ದೂರು ನೀಡಿದವರಿಗೆ ವಂಚಿಸಿದ ವ್ಯಕ್ತಿಗಳು ಯಾರು? ಎಲ್ಲಿಂದ ಬಂದಿದ್ದಾರೆ ಎಂಬುದೂ ಗೊತ್ತಿಲ್ಲ.
ಇ-ಸ್ಟೋರ್ ಅಂಗಡಿ ಮಾಡಿಕೊಡುವುದಾಗಿ ಅಲ್ಲಿನ ಸ್ಥಳೀಯರಿಗೆ ಹೇಳಿ ಹಣ ಪಡೆದು, ಕೆಲವರಿಗೆ ಅಂಗಡಿ ಮಾಡಿಕೊಟ್ಟಿದ್ದಾರೆ. ಅದರಲ್ಲಿ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಕೊಡುವುದಾಗಿ ಹೇಳಿ ಸ್ವಲ್ಪ ದಿನಗಳ ಕಾಲ ರಿಯಾಯಿತಿಯಲ್ಲಿ ವಸ್ತುಗಳನ್ನೂ ಕೊಟ್ಟಿದ್ದಾರೆ. ನಂತರ ಹಣ ಪಡೆದವರಿಗೆ ಅಂಗಡಿಯನ್ನೂ ಮಾಡಿಕೊಡದೆ ಮೋಸ ಮಾಡಿದ್ದಾರೆ ಎಂಬ ವಿಷಯ ಗಮನಕ್ಕೆ ಬಂದಿದೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲದೆ, ಶಿವಮೊಗ್ಗದಲ್ಲೂ ಇಂತಹ
ದೂರು ಬಂದಿದ್ದು, ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದವರು ಹೇಳಿದರು.