ಮಕ್ಕಳು ಕೀಳರಿಮೆ ಭಾವನೆ ಬಿಡಬೇಕು

ರಾಣೇಬೆನ್ನೂರು ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಎಸ್ಪಿ ಶಿವಕುಮಾರ್

ರಾಣೇಬೆನ್ನೂರು, ಜು.13- ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ  ನೂತನ  ಶಾಲಾ ಸಂಸತ್  ಪದಾಧಿಕಾರಿಗಳ ಪದಗ್ರಹಣ ಸಮಾರಂಭ  ಜರುಗಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ   ಡಾ. ಶಿವಕುಮಾರ್ ಗುಶ್ಚಿಬ ಅವರು  ಆಗಮಿಸಿ, ಶಾಲೆಯ ನಾಯಕರುಗಳಿಗೆ  ಬ್ಯಾಡ್ಜ್ ಹಾಕುವುದರ  ಶುಭ ಕೋರಿದರು. 

 ಅವರು ಮಾತನಾಡಿ, ಜೀವನದಲ್ಲಿ ಬೆಳೆದು, ಸಾಗಿ ಬಂದ ದಾರಿಯನ್ನು ಹೇಳುವುದರ ಮೂಲಕ ಮಕ್ಕಳು ಭಯ ಹಾಗೂ ಕೀಳರಿಮೆ ಭಾವನೆಯಿಂದ ಮುಕ್ತರಾಗಬೇಕು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶ್ರದ್ಧೆ ಭಕ್ತಿ ಹಾಗೂ ಸತತ ಪರಿಶ್ರಮದ ಮೂಲಕ ಉತ್ತಮ ರೀತಿಯಲ್ಲಿ ಓದಿ, ಉತ್ತಮ ಸಾಧನೆ ಮಾಡುವುದರ ಮೂಲಕ  ತಂದೆ-ತಾಯಿಗಳಿಗೆ, ಶಾಲೆಗೆ ಮತ್ತು ಕಲಿಸಿದ ಗುರುಗಳಿಗೆ ಹೆಸರನ್ನು ತಂದು ಕೊಡುವ ಕೆಲಸ ಮಾಡಿ, ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವುದರ  ಮೂಲಕ ಜವಾಬ್ದಾರಿಯುತ, ಶ್ರೇಷ್ಠ ವ್ಯಕ್ತಿಗಳಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಾಲೆಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಮುರುಡಣ್ಣವರ್ ತಮ್ಮ ಭಾಷಣದಲ್ಲಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಧನಾತ್ಕಕ ಮನೋಭಾವನೆ ಬೆಳೆಸಿಕೊಂಡು ಗುರಿ ಸಾಧಿಸಲು ನಿಮ್ಮ ಗುರಿ ವಿವೇಚನೆಯೆಡೆಗೆ ಸಾಗಿದರೆ ಉತ್ತಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬಹುದು ಎಂದರು. 

ಶಾಲೆಯ  ಅಧ್ಯಕ್ಷ ವಾಸುದೇವಸಾ ಪಿ. ಲದ್ವಾ ಉಪಸ್ಥಿತರಿದ್ದರು.   ನಿರ್ದೇಶಕರುಗಳಾದ ಡಾ. ಬಿ. ಆರ್. ಸಾವಕಾರ, ಡಾ. ಎಂ.ಎಂ. ಅನಂತರೆಡ್ಡಿ,   ತುಳಜಪ್ಪ ಲದ್ವಾ, ಮಲ್ಲಿಕಾರ್ಜುನ ಅಂಗಡಿ ಹಾಗೂ ಶಾಲೆಯ ಪ್ರಾಂಶುಪಾಲ  ಪ್ರಕಾಶ್ ಎಸ್. ಉಪಸ್ಥಿತರಿದ್ದರು.

ಶ್ರೀಮತಿ ವಿಮೋಚನಾ ಹಿರೇಮಠ  ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಫರೀನಾ ನಾಝ್ ಸ್ವಾಗತಿಸಿದರು.  ಶಿವಕುಮಾರ್ ಮಡಿವಾಳ ಮುಖ್ಯಅತಿಥಿಗಳ ಪರಿಚಯ ಮಾಡಿದರು. ದೈಹಿಕ ಶಿಕ್ಷಕಿ ಸುನೀತಾ ತೆಂಬದ ಪ್ರತಿಜ್ಞಾ ವಿಧಿ ಬೋಧಿಸಿದರು. ರವಿಕುಮಾರ್ ಐರಣಿ  ವಂದಿಸಿದರು. 

error: Content is protected !!