ಜಗಳೂರು ಕೆರೆ ಯೋಜನೆ ವಿಳಂಬ

ಜಗಳೂರು ಕೆರೆ ಯೋಜನೆ ವಿಳಂಬ

ಸದನದಲ್ಲಿ ಪ್ರಸ್ತಾಪಿಸಿದ ಶಾಸಕ ಬಿ.ದೇವೇಂದ್ರಪ್ಪ

ಜಗಳೂರು, ಜು.13- ವಿಧಾನಸಭಾ ಕ್ಷೇತ್ರದ 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ತೀವ್ರ ವಿಳಂಬವಾಗಿರುವುದನ್ನು ಶಾಸಕ ಬಿ.ದೇವೇಂದ್ರಪ್ಪ ಇಂದು ಸದನದಲ್ಲಿ ಪ್ರಸ್ತಾಪಿಸಿ, ಸರ್ಕಾರದ ಗಮನ ಸೆಳೆದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು, ನಂಜುಂಡಪ್ಪ ವರದಿಯನ್ವಯ ಜಗಳೂರು ಕ್ಷೇತ್ರ ರಾಜ್ಯದಲ್ಲಿ ಅತಿ ಹಿಂದುಳಿದ ಕ್ಷೇತ್ರವಾಗಿದ್ದು ಕ್ಷೇತ್ರದ ಜನರ ಅನುಕೂಲಕ್ಕಾಗಿ ಜಾರಿ ಗೊಂಡಿರುವ ಕೆರೆ ತುಂಬಿಸುವ ಯೋಜನೆ ನೀರಾವರಿಯಲ್ಲಿ ನಿಗಮದ ಅಧಿಕಾರಿಗಳು ನೆಪ ಹೇಳುತ್ತಾ ವಿಳಂಬ ನೀತಿ ಅನುಸರಿ ಸುತ್ತಿದ್ದಾರೆ ಎಂದು ಹೇಳಿದರು.

2018ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು, ಸಿರಿಗೆರೆ ಶ್ರೀಗಳ ಆಶಯದಂತೆ ಕ್ಷೇತ್ರದ 57 ಕೆರೆ ತುಂಬಿಸುವ ಯೋಜನೆಗೆ 665 ಕೋಟಿ ರೂ.ಗಳ ದೀಟೂರು ಏತ ನೀರಾವರಿ ಯೋಜನೆಗೆ ಬಜೆಟ್ ನಲ್ಲಿ ಹಣ ಮೀಸಲು ಇಟ್ಟಿದ್ದರು.

ಯೋಜನೆ ಆರಂಭವಾಗಿ 6 ವರ್ಷಗಳು ಕಳೆದಿವೆ. ಇಬ್ಬರು ಶಾಸಕರು ಆಯ್ಕೆಯಾಗಿ ಹೋ ಗಿದ್ದಾರೆ. ಆದರೆ ನೀರಾವರಿ ನಿಗಮದ ಅಧಿ ಕಾರಿಗಳು ಸುಳ್ಳು ಹೇಳುತ್ತಾ ರೈಲು ಬೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಜವಾನನನ್ನು ಆಯ್ಕೆ ಮಾಡಿದ ಕ್ಷೇತ್ರ: ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನನಗೆ ಸ್ಪರ್ಧಿಸಲು ಅವಕಾಶ ನೀಡಿದಾಗ ಸಮಾಜದ ಕಟ್ಟ ಕಡೆಯ ವ್ಯಕ್ತಿ ಜವಾನ ಏನು ಕೆಲಸ ಮಾಡುತ್ತಾನೆ ? ಅವರಿಂದ ಯಾವ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ ? ಎಂದು ಅಪಪ್ರಚಾರ ಮಾಡಿದ್ದರು. ಜನ ನನ್ನ ಮೇಲೆ ಭರವಸೆ ಇಟ್ಟು ಗೆಲ್ಲಿಸಿದ್ದಾರೆ ಎಂದರು.

ಕ್ಷೇತ್ರದ ಅಭಿವೃದ್ಧಿಯಾಗಬೇಕಾದರೆ 57 ಕೆರೆ ತುಂಬಿಸುವ ಯೋಜನೆ ಪೂರ್ಣಗೊಳ್ಳಬೇಕಿದೆ. ಇನ್ನೂ 7 ಕಿ.ಮೀ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಬಾಕಿ ಉಳಿದಿದೆ. ಅದು ಪೂರ್ಣಗೊಂಡರೆ ಉಳಿದ 34 ಕೆರೆಗಳಿಗೂ ನೀರು ಹರಿಸಬಹುದು. ನೀರಾವರಿ ನಿಗಮದ ಅಧಿಕಾರಿಗಳು ಕಾಮಗಾರಿಯನ್ನು ತುರ್ತಾಗಿ ಗೊಳಿಸಬೇಕಾಗಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಅವರು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

error: Content is protected !!