ಕೆ.ಎ.ಎಸ್. ಉಚಿತ ತರಬೇತಿ

ದಾವಣಗೆರೆ, ಜು.12-  ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಜಿಎಂ ತಾಂತ್ರಿಕ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗ   ನಡೆಸುವ ಕೆ.ಎ.ಎಸ್. ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಇದೇ ದಿನಾಂಕ 17 ರಿಂದ 26 ರವರೆಗೆ  ಉಚಿತ ಪರೀಕ್ಷಾ ಪೂರ್ವ ತರಬೇತಿ ನಡೆಯಲಿದೆ.

ರೂಂ. ನಂ. 104, 3ನೇ ಮಹಡಿ, ಇಂಜಿನಿಯರಿಂಗ್ ಬ್ಲಾಕ್,  ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯುವ ತರಬೇತಿಗೆ ಹಾಜರಾಗಲಿಚ್ಛಿಸುವ ಅಭ್ಯರ್ಥಿಗಳು ಇದೇ ದಿನಾಂಕ  17ರ ಬೆಳಿಗ್ಗೆ 10  ಗಂಟೆಗೆ  ತರಬೇತಿಗೆ ಹಾಜರಾಗ ಬೇಕು (ವಿವರಕ್ಕೆ ಸಂಪರ್ಕಿಸಿ : 7406323294 ಅಥವಾ 861816 6204) ಎಂದು ಉದ್ಯೋಗಾಧಿಕಾರಿ ಡಿ.ರವೀಂದ್ರ ತಿಳಿಸಿದ್ದಾರೆ.

error: Content is protected !!