ಸಿರಿಗೆರೆಯಲ್ಲಿ ನಾಳೆ `ಮರಣವೇ ಮಹಾನವಮಿ’ ನಾಟಕ ಪ್ರದರ್ಶನ

ಸಿರಿಗೆರೆ, ಜು. 12- ತರಳಬಾಳು ಜಗದ್ಗುರು ಬೃಹನ್ಮಠದ ತರಳಬಾಳು ಕಲಾಸಂಘ ಮತ್ತು ಕನ್ನಡ, ಸಂಸ್ಕೃತಿ ಇಲಾಖೆ (ಬೆಂಗಳೂರು) ಇವರ ಸಹಭಾಗಿತ್ವದಲ್ಲಿ ನಾಡಿದ್ದು ದಿನಾಂಕ 14 ಮತ್ತು 15ರಂದು ಇಲ್ಲಿನ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಮರಣವೇ ಮಹಾನವಮಿ ನಾಟಕ ಪ್ರದರ್ಶನವು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದೆ.

ಸಾಹಿತಿ, ಪ್ರಸಿದ್ಧ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಭಾರತೀಯ ರಂಗಭೂಮಿ ಕಲಾವಿದ, ನಟ-ನಿರ್ದೇಶಕ ಪ್ರಕಾಶ್ ಬೆಳವಾಡಿ ಹಾಗೂ ಹಿರಿಯ ರಂಗ ನಿರ್ದೇಶಕ ಮಾಲತೇಶ್ ಬಡಿಗೇರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರಧಾನ ಕಾರ್ಯದರ್ಶಿ ಎಸ್.ಬಿ.ರಂಗನಾಥ್, ಆಡಳಿತಾಧಿಕಾರಿ ಹೆಚ್.ವಿ.ವಾಮದೇವಪ್ಪ ಹೆಸರಾಂತ ಗಾಯಕ ತೋಟಪ್ಪ ಉತ್ತಂಗಿ ಉಪಸ್ಥಿತರಿರುವರು.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಮಲ್ಲಕಂಬ, ನೀಲಾಂಬಿಕಾ ಪ್ರೌಢಶಾಲೆ, ಬಿ.ಎಲ್.ಆರ್ ಪ್ರೌಢಶಾಲೆ, ನರ್ಸರಿ, ಪ್ರೈಮರಿ ಪ್ರೌಢಶಾಲೆ, ತರಳಬಾಳು ಸಿ.ಬಿ.ಎಸ್.ಇ ಶಾಲೆಯ ಮಕ್ಕಳಿಂದ ವಚನ ಗಾಯನ ಹಾಗೂ ಮಲ್ಲಕಂಬ ಜರುಗುವುದು ಎಂದು ತರಳಬಾಳು ಕಲಾ ಸಂಘದ ಅಧ್ಯಕ್ಷ ರಾಜಶೇಖರಯ್ಯ  ತಿಳಿಸಿದ್ದಾರೆ.

error: Content is protected !!