ಅಂತರರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ : ಮಹೀನ್ ಹಂಪನೂರು ಆಯ್ಕೆ

ಅಂತರರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ : ಮಹೀನ್ ಹಂಪನೂರು ಆಯ್ಕೆ

ದಾವಣಗೆರೆ, ಜು. 12 –  ದುಬೈನಲ್ಲಿ ಬರುವ ಅಕ್ಟೋಬರ್‍ನಲ್ಲಿ 8 ಮತ್ತು 9ರಂದು ನಡೆಯುವ 9ನೇ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಗೆ ದಾವಣಗೆರೆ ನಗರದ ಶಾಮನೂರು ಶಿವಶಂಕರಪ್ಪ ನ್ಯಾಷನಲ್ ಪಬ್ಲಿಕ್ ಶಾಲೆ ವಿದ್ಯಾರ್ಥಿ ಮಹೀನ್ ಹಂಪನೂರು ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಮೊನ್ನೆ ನಡೆದ  ರಾಷ್ಟ್ರಮಟ್ಟದ ಯೋಗಾಸನ ಚಾಂಪಿಯನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಬಂಗಾರದ ಪದಕ ಪಡೆದು ಮಾಹೀನ್ ಹಂಪನೂರು ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ನಗರದ ಶ್ರೀಮತಿ ಸುಮ, ಮಹಾದೇವ್ ಹಂಪನೂರು ಪುತ್ರನಾಗಿರುವ ಮಹೀನ್ ಹಂಪನೂರು ಎಸ್.ಎಸ್.ಯೋಗ ಫಿಟ್‍ನೆಸ್ ಅಂಡ್ ಯೋಗ ಇನ್‌ಸ್ಟಿಟ್ಯೂಟ್‍ನ ಅಂತರರಾಷ್ಟ್ರೀಯ ಕ್ರೀಡಾಪಟು ಹಾಗೂ ಅಂತರರಾಷ್ಟ್ರೀಯ ತರಬೇತುದಾರ ಡಿ. ಸಂತೋಷ್ ಅವರ ಬಳಿ ತರಬೇತಿ ಪಡೆದಿದ್ದಾರೆ. ಮಹೀನ್ ಸಾಧನೆಗೆ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಲೆಯ ಛೇರ್ಮನ್ ಎಸ್.ಎಸ್.ಗಣೇಶ್, ಡೀನ್ ಮಂಜುನಾಥ್ ಶುಭ ಹಾರೈಸಿದ್ದಾರೆ.

error: Content is protected !!