ಹೂವಿನಹಡಗಲಿ, ಜು. 12- ಹೂವಿನಹಡಗಲಿಯ ಹಡಗಲಿ ಅರ್ಬನ್ ಕೋ-ಆಪರೇಟೀವ್ ಬ್ಯಾಂಕಿನ ಚುನಾವಣೆಗೆ ಸ್ಪರ್ಧಿಸಿದ್ದ 13 ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸಾಮಾನ್ಯ ಕ್ಷೇತ್ರದಿಂದ ಶಿವಪ್ಪ ಗಡ್ಡಿಗೌಡ್ರ, ಜಿ.ವೇಣುಗೋಪಾಲ್ ಶೆಟ್ಟಿ, ಎಂ. ನಾಗಭೂಷಣ್, ಎಸ್.ಎಂ. ರವೀಂದ್ರ ಶೆಟ್ಟಿ, ವೀರೇಶ್ ಹಣ್ಣಿ, ಮುರುಗೇಶ ತುರುಕಾಣಿ, ರಮೇಶ್ ಮೇಟಿ, ಮಹಿಳಾ ಮೀಸಲು ಕ್ಷೇತ್ರದಿಂದ ಮಂಗಳಾ ಸೊಪ್ಪಿನ, ಹೆಚ್. ಸುಮಾ ವಿಜಯ, ಹಿಂದುಳಿದ ಎ ವರ್ಗದಿಂದ ಕೆ.ಎಂ. ಗಂಗಾಧರ, ಹಿಂದುಳಿದ ಬಿ ವರ್ಗದಿಂದ ಎನ್.ಎಂ. ವಹಾಬ್, ಪರಿಶಿಷ್ಟ ಜಾತಿಯಿಂದ ಲಾಲ್ಯಾನಾಯ್ಕ, ಪರಿಶಿಷ್ಟ ಪಂಗಡದಿಂದ ಬಿ. ದೇವೇಂದ್ರಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.