ಅಖಿಲ ಕರ್ನಾಟಕ ಡಾ. ರಾಜ್ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ, ಡಾ. ಶಿವರಾಜ್ಕುಮಾರ್ ಅಭಿಮಾನಿಗಳ ಸಂಘ, ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಇಂದು ಬೆಳಿಗ್ಗೆ 9.30 ಗಂಟೆಗೆ ಶಿವರಾಜ್ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಅರ್ಚನೆ ಮತ್ತು ವಿಶೇಷ ಪೂಜೆ ಹಾಗೂ 11.30 ಕ್ಕೆ ನಗರದ 35ನೇ ವಾರ್ಡಿನ ಶ್ರೀ ಮಣಿಕಂಠ ಸರ್ಕಲ್ನಲ್ಲಿ ಶ್ರೀಮತಿ ಸವಿತಾ, ಹುಲ್ಲುಮನೆ ಗಣೇಶ್ ಅವರ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಯೋಗೇಶ್ ತಿಳಿಸಿದ್ದಾರೆ.
January 11, 2025