ನಗರದಲ್ಲಿ ಇಂದು `ಸಾಧನೆಯ ಹಾದಿಯಲ್ಲಿ ಡಾ.ಜಿ.ಸಿ. ಬಸವರಾಜ್’ ಕೃತಿ ಬಿಡುಗಡೆ

ನಗರದಲ್ಲಿ ಇಂದು `ಸಾಧನೆಯ ಹಾದಿಯಲ್ಲಿ ಡಾ.ಜಿ.ಸಿ. ಬಸವರಾಜ್’ ಕೃತಿ ಬಿಡುಗಡೆ

ದಾವಣಗೆರೆ, ಜು. 8- ವೈದ್ಯಕೀಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ `ಸಾಧನೆಯ ಹಾದಿಯಲ್ಲಿ ಡಾ.ಜಿ.ಸಿ. ಬಸವರಾಜ್’ ಕೃತಿ ಲೋಕಾರ್ಪಣೆ ಸಮಾರಂಭ ನಾಳೆ ದಿನಾಂಕ 9 ರ ಭಾನುವಾರ ಸಂಜೆ 5.30 ಕ್ಕೆ ನಗರದ ರೋಟರಿ ಬಾಲಭವನದಲ್ಲಿ ನಡೆಯಲಿದೆ ಎಂದು ಲೇಖಕ ಡಾ.ಎನ್.ಜೆ. ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಡಾ. ಜಿ.ಸಿ. ಬಸವರಾಜ್ ಸ್ನೇಹ ಬಳಗದ ವತಿಯಿಂದ ಹಮ್ಮಿಕೊಂಡಿ ರುವ ಈ ಕಾರ್ಯಕ್ರಮದಲ್ಲಿ ಗದಗ ಡಂಬಳದ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಚಿತ್ರದುರ್ಗ ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ, ಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಡಾ. ಬಸವ ಜಯಚಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಡಾ. ಸಿದ್ಧಲಿಂಗಪ್ಪ ಎಲಿ ಅಧ್ಯಕ್ಷತೆ ವಹಿಸುವರು. ಜಗಳೂರು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜೆಜೆಎಂ ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ.ಎಂ.ಜಿ. ರಾಜಶೇಖರ್ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.

ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಕೃತಿ ಕುರಿತು ಮಾತನಾಡಲಿದ್ದು ಕೀಲು, ಮೂಳೆ ತಜ್ಞ ಡಾ.ಜಿ.ಸಿ. ಬಸವರಾಜ್, ಜೆಜೆಎಂ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಬಿ. ಮುರುಗೇಶ್, ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕ ಡಾ.ಸುಬ್ಬಾರೆಡ್ಡಿ, ಶಾಸಕ ಎನ್.ವೈ. ಗೋಪಾಲಕೃಷ್ಣ, ಮಾಜಿ ಶಾಸಕ ಪ್ರೊ.ಎನ್. ಲಿಂಗಣ್ಣ, ಉಪನ್ಯಾಸಕ ಬಸವರಾಜ ಹನುಮಲಿ ಮತ್ತಿತರರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಾ.ಜಿ.ಸಿ. ಬಸವರಾಜ್, ಶಿವರುದ್ರಾಚಾರ್, ಚಂದ್ರಶೇಖರಸ್ವಾಮಿ ಉಪಸ್ಥಿತರಿದ್ದರು.

error: Content is protected !!